ಶುಕ್ರವಾರ, ಏಪ್ರಿಲ್ 16, 2021
31 °C

ಸಂಭ್ರಮದ ಚಿಲ್ಲರ್ಗಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಹಜರತ್ ಸೈಯದ್ ಶಾಹ ಮೌಲಾನಾ ಫಕ್ರೊದ್ದೀನ್ ದರ್ಗಾದ ಜಾತ್ರಾ ಮಹೋತ್ಸವವು ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಬುಧವಾರ ಸಂಭ್ರಮದಿಂದ ನಡೆಯಿತು.ಮಂಗಳವಾರ ರಾತ್ರಿ ಸಂದಲ್ ಮೆರವಣಿಗೆಯೊಂದಿಗೆ ಜಾತ್ರೆಗೆ ಚಾಲನೆ ಸಿಕ್ಕಿತ್ತು. ಸಂದಲ್ ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು ಹಾಗೂ ಯುವಕರು ಕಿವಿಗಡಚಿಕ್ಕುವ ಸಂಗೀತಕ್ಕೆ ಹೆಜ್ಜೆ ಹಾಕಿದರು.ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧೆಗಳಿಂದ ಬಂದಿದ್ದ ಜನ ದರ್ಗಾದಲ್ಲಿ ದರ್ಶನ ಪಡೆದರು. ನೆರೆಯ ಆಂಧ್ರ ಮತ್ತು ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿದ್ದರು.ಜಾತ್ರಾ ಮಹೋತ್ಸವದ ಅಂಗವಾಗಿ ದರ್ಗಾದ ಸುತ್ತಮುತ್ತಲಿನ ಪರಿಸರದಲ್ಲಿ ವಿವಿಧ ಅಂಗಡಿಗಳನ್ನು ಹಾಕಲಾಗಿತ್ತು. ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಾತ್ರೆಯಲ್ಲಿ ಪಾಲ್ಗೊಳ್ಳಲು ವಿವಿಧೆಡೆಗಳಿಂದ ನೆಂಟರಿಷ್ಟರೂ ಆಗಮಿಸಿದ್ದು ಇದಕ್ಕೆ ಕಾರಣ ಆಗಿತ್ತು.ಸುತ್ತುವ ಜೋಕಾಲಿ, ಮಕ್ಕಳ ಆಟಿಕೆ, ಸಿಹಿ ತಿಂಡಿ ತಿನಿಸು ಮತ್ತಿತರ ಅಂಗಡಿಗಳಿದ್ದವು. ಪೇಡಾ, ಬರ್ಫಿ, ಚುಡುವಾ, ಐಸ್‌ಕ್ರಿಂ, ಅಳ್ಳು, ಬೆಂಡು ಬತಾಸೆ ಮತ್ತಿತರ ಅಂಗಡಿಗಳಲ್ಲಿ ಜನ ಜಾತ್ರೆ ಕಂಡು ಬಂದಿತ್ತು. ಮಕ್ಕಳು ವಿವಿಧ ಆಟಿಕೆಗಳನ್ನು ಖರೀದಿಸಿ ಸಂಭ್ರಮಿಸಿದರು. ಚಿಲ್ಲರ್ಗಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಜಾತಿ ಭೇದ ಇಲ್ಲದೇ ಸರ್ವ ಸಮುದಾಯಗಳ ಜನರೂ ಪಾಲ್ಗೊಳ್ಳುತ್ತಾರೆ. ಹೀಗಾಗಿ ಜಾತ್ರೆ ಈ ಭಾಗದಲ್ಲಿ ಭಾವೈಕ್ಯತೆಯ ಸಂಕೇತ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.