ಗುರುವಾರ , ಜೂನ್ 24, 2021
23 °C

ಸಂಭ್ರಮದ ಜಡೇರುದ್ರಸ್ವಾಮಿ ಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಸಹಸ್ರಾರು ಭಕ್ತರ ಮುಗಿಲು ಮುಟ್ಟುವ ಜಯಘೋಷದ ನಡುವೆ ತಟ್ಟೆಕೆರೆ ಮಹದೇಶ್ವರಸ್ವಾಮಿ ಹಾಗೂ ಜಡೇರುದ್ರೇಶ್ವರಸ್ವಾಮಿ ಅಗ್ನಿಕೊಂಡೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.ಮಹದೇಶ್ವರ ಮತ್ತು ಜಡೇರುದ್ರಸ್ವಾಮಿ ದೇವಾಲಯದಲ್ಲಿ ಸಂಜೆ ಮಹಿಳೆಯರಿಂದ ಹಾಲರವೆ ಸೇವೆ ನಡೆಯಿತು. ನಂತರ ದೇವಾಲಯದಿಂದ ಮೆರವಣಿಗೆ ಹೊರಟು ಕೊಂಡೋತ್ಸವದ ಬಳಿ ಬಂದು ಪೂಜೆ ಸಲ್ಲಿಸಲಾಯಿತು.

ಕೊಂಡದ ಬಳಿ ಸೇರಿದ್ದ ಸಹಸ್ರಾರು ಭಕ್ತರ ಉದ್ಘೋಷಗಳ ನಡುವೆ ದೇವಾಲಯದ ಅರ್ಚಕರು ಗಳಾದ ನಂದೀಶ, ನಾಗೇಂದ್ರ ಹಾಗೂ ರಾಜಶೇಖರ ಮೂರ್ತಿ ಅಗ್ನಿಕೊಂಡ ಪ್ರವೇಶಿಸಿದರು.ನಂತರ ಪಂಜಿನ ಸೇವೆ ನಡೆಯಿತು. ಪಂಜಿನ ಸೇವೆಯಲ್ಲಿ ಶಿವಲಂಕಾರಪ್ಪ ಅವರು, ತಮ್ಮ ಮೈ ಸುತ್ತಲೂ ಪಂಜು ಕಟ್ಟಿಕೊಂಡು ನಡೆಸಿದ ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕೊಂಡೋತ್ಸವ, ಪಂಜಿನ ಸೇವೆಯ ನಂತರ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರಿಗೆ ಪ್ರಸಾದ ವಿನಿಯೋಗಮಾಡಲಾಯಿತು.ಕೊಂಡೋತ್ಸವದಲ್ಲಿ ದೇವಾಲಯದ ದಾಖಲೆ ಗ್ರಾಮಗಳಾದ ಒಡೆಯರಪಾಳ್ಯ, ಹುಣಸೇಪಾಳ್ಯ, ಗುಂಡಿಮಾಳ, ಹೊಸಪೋಡು, ಕೆ.ಕೆ.ಪೋಡು, ಹಿರಿ ಯಂಬಲ, ಬಿಜಿದೊಡ್ಡಿ,ವಿ.ಎಸ್.ದೊಡ್ಡಿ, ಬಿ.ಎಂ.ದೊಡ್ಡಿ, ಎಂ.ಜಿ.ದೊಡ್ಡಿ, ಕರಿಯಪ್ಪನದೊಡ್ಡಿ, ಅಂಡೇಕುರುಬನದೊಡ್ಡಿ, ಎ.ಜಿ.ಪಾಳ್ಯ, ಕೆರೆದೊಡ್ಡಿ, ಕಾನ್‌ಮೇಳದೊಡ್ಡಿ, ಉದ್ದಟ್ಟಿ ಸೇರಿದಂತೆ ಇತರೆ ಗ್ರಾಮಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.ಕೊಂಡೋತ್ಸವದ ಅಂಗವಾಗಿ ದೇವಾಲಯವನ್ನು ತಳಿರುತೋರಣ ಮತ್ತು ವರ್ಣಮಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ ದಾಖಲೆ ಎಲ್ಲಾ ಗ್ರಾಮಗಳ್ಲ್ಲಲೂ ಹಬ್ಬದ ಸಂಭ್ರಮ ಸಡಗರ ನೆಲೆ ಮಾಡಿತ್ತು.ಶುಕ್ರವಾರ ಬೆಳಿಗ್ಗೆ ದೇವಾಲಯದಲ್ಲಿ ಹುಲಿವಾಹನ ಮೆರವಣಿಗೆ ಅದ್ದೂರಿಯಿಂದ ನೆರವೇರಿತು ದೇವಾಲ ಯದ ಮುಂದೆ ಸಮಾವೇಶಗೊಂಡಿದ್ದ ಭಕ್ತರು ದೇವರಿಗೆ ಹರಕೆಗಳನ್ನು ತೀರಿಸಿ ಪೂಜೆ ಸಲ್ಲಿಸಿದರು.ಅನ್ನಸಂತರ್ಪಣೆ: ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಅಮ್ಮ ಭಗವಾನ್ ಸೇವಾ ಸಮಿತಿ ವತಿಯಿಂದ ಭಗವಾನರ 64ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಈಚೆಗೆ ಅದ್ದೂರಿಯಿಂದ ಆಚರಿಸಲಾಯಿತು.ಕಲ್ಯಾಣ ಮಂಟಪದಲ್ಲಿ ಭಗವಾನರ ದಿವ್ಯಪಾದುಕಾಭಿಷೇಕ, ಸಂಕೀರ್ತನೆ, ಪ್ರಾರ್ಥನೆ, ಮೂಲಮಂತ್ರ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಅನ್ನಸಂತರ್ಪಣೆ ನೆರವೇರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.