ಭಾನುವಾರ, ಮೇ 16, 2021
22 °C

ಸಂಭ್ರಮದ ದಸರಾ ಆಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಾಡಹಬ್ಬ ದಸರಾ ಮಹೋತ್ಸವವನ್ನು ಈ ವರ್ಷವೂ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಸಡಗರ, ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು,  ಇದೇ 30ರಿಂದ ಅಕ್ಟೋಬರ್ 4ರವರೆಗೂ ದಸರಾ ಉತ್ಸವ ನಡೆಯಲಿದೆ.30ರಂದು ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬನ್ನಿಮಂಟಪದಿಂದ ಚಾಮುಂಡಿ ವಿಗ್ರಹವನ್ನು ಒಳಗೊಂಡ ದಸರಾ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ವಿವಿಧ 40 ಕಲಾತಂಡಗಳು, ಪೊಲೀಸ್‌ಬ್ಯಾಂಡ್ ಭಾಗವಹಿಸಲಿವೆ.ಅಲ್ಲದೆ, ಐದು ದಿನ ಕಾಲದ ಶ್ರೀರಂಗಪಟ್ಟಣದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂವರ ಸಂಗೀತ ರಸರಂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ನಗರದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಿದ್ಧತೆಗಳನ್ನು ಕುರಿತ ಮಾಹಿತಿಯನ್ನು ಒದಗಿಸಿದರು.ಸೂರ್ಯ ಕಲಾವಿದರಿಂದ ನೃತ್ಯರೂಪಕ, ನಗೆಹಬ್ಬ, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಮಂಡ್ಯ ರಮೇಶ್ ಅವರಿಗೆ ನಾಟಕೋತ್ಸವ, ಯಕ್ಷಗಾನ, ಕವಾಲಿ, ಚಲನಚಿತ್ರ ಹಿನ್ನೆಲೆ ಗಾಯಕ ರಘುದೀಕ್ಷಿತ ಹಾಡುಗಾರಿಕೆ ಮತ್ತಿತರ ಕಾರ್ಯಕ್ರಮಗಳು ದಸರಾ ಹಬ್ಬದ ವೈಭವವನ್ನು ಹೆಚ್ಚಿಸಲಿವೆ ಎಂದು ಹೇಳಿದರು.ದಸರಾ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ವಚ್ಛತೆ, ಬರುವ ಪ್ರವಾಸಿಗಳಿಗೆ ಕುಡಿಯುವ ನೀರು ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು ಎಂದು ಶಾಸಕ ಎ.ಬಿ.ರಮೇಶ್‌ಬಾಬು ಅವರು ಹೇಳಿದರು.ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಎಂ. ಶ್ರೀನಿವಾಸ್, ಅಶ್ವತ್ಥನಾರಾಯಣ, ಜಿಪಂ ಸಿಇಒ ಜಿ.ಜಯರಾಂ, ಉಪವಿಭಾಗಾಧಿಕಾರಿ ರಂಗಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುಜ್ಞಾನಮೂರ್ತಿ, ಯುವಜನಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ, ತಹಶೀಲ್ದಾರ್‌ಗಳಾದ ರಾಜೇಂದ್ರ ಪ್ರಸಾದ್, ಅರುಳ್‌ಕುಮಾರ್, ಶಿವಾನಂದಮೂರ್ತಿ ಅವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.