ಬುಧವಾರ, ಜೂನ್ 23, 2021
24 °C

ಸಂಭ್ರಮದ ನರಸಿಂಹಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ಹೋಬಳಿಯ ಬೆಳಗೀಹಳ್ಳಿ ಗ್ರಾಮದಲ್ಲಿ ಕಂಬದ ನರಸಿಂಹಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮಖದಲ್ಲಿ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.ಗ್ರಾಮಸ್ಥರು ಒಂದು ವಾರ ಈ ರಂಗದ ಹಬ್ಬವನ್ನು ಭಕ್ತಿಭಾವದಿಂದ ಆಚರಣೆ ಮಾಡಿದರು. ಮಂಗಳವಾದ್ಯ ಗಳೊಂದಿಗೆ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ರಥದ ಬಳಿಗೆ ತರಲಾ ಯಿತು. ವಿವಿಧ ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಶೃಂಗಾರಗೊ ಳಿಸಿದ್ದ ರಥದ ಮೇಲೆ ಸ್ವಾಮಿ ಕೂರಿಸಿದರು. ಭಕ್ತರು ಬಾಳೆಹಣ್ಣು ಮತ್ತು ದವನವನ್ನು ಕಳಸದತ್ತ ಎಸೆದು ಪುನಿತರಾದರು.ಜಾನಪದ ಕಲಾವಿದರಾದ ನಾಗಮಂಗಲದ ರುದ್ರೇಶ್ ಮತ್ತು ತಂಡದವರ ವೀರಭದ್ರನ ಕುಣಿತ ಆಕರ್ಷಿಸಿತು.  ಮುದ್ದುಗುಂಡುಗಳ ಪ್ರದರ್ಶನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.