ಸೋಮವಾರ, ಜೂನ್ 21, 2021
20 °C

ಸಂಭ್ರಮದ ಬಸವೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಸಮೀಪದ ನಂದಿಗುಡಿ ಬಸವೇಶ್ವರ ದೇವರ ರಥೋತ್ಸವ ಭಾನುವಾರ ಅಪಾರ ಜನಸ್ತೋಮದ ಮಧ್ಯೆ ಹಮ್ಮಿಕೊಳ್ಳಲಾಗಿತ್ತು.  ಉತ್ಸವಕ್ಕೂ ಮುನ್ನ ದೇವಾಲಯದಲ್ಲಿ ಹೋಮ ಹವನ ಜರುಗಿದವು. ರಾಜಬೀದಿಯಲ್ಲಿ ಬಸವೇಶ್ವರ ಉತ್ಸವಮೂರ್ತಿಯೊಂದಿಗೆ, ಜೋಡು ದೀಪ, ಬಿರುದು ಬಾವಲಿಯೊಂದಿಗೆ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಜನಮನ ಸೆಳೆಯಿತು.

ಮಂಗಳವಾದ್ಯ, ಡೊಳ್ಳುಕುಣಿತ, ಭಜನಾತಂಡ, ಜಾಂಚ್ ಮೇಳ ಪುರವಂತರ ವೀರಗಾಸೆ ಕುಣಿತ ಉತ್ಸವಕ್ಕೆ ಕಳೆ ತಂದಿದ್ದವು. "ರಥಶಾಂತಿ, ಬಲಿದಾನದ ನಂತರ ಸ್ವಾಮೀಜಿ ರಥಪೂಜೆ ನೆರವೇರಿಸಿದರು. ತೆಂಗಿನಕಾಯಿ, ಬಾಳೆಹಣ್ಣು, ಮಂಡಕ್ಕಿ, ಉತ್ತತ್ತಿ, ಧಾನ್ಯ ಅರ್ಪಿಸಿದರು.ಹರಹರ ಮಹಾದೇವ ಘೋಷಣೆಯೊಂದಿಗೆ ಜನತೆ ರಥ ಎಳೆದರು.ಮುಖ್ಯಬೀದಿಯನ್ನು ಬಳೆ, ಆಟಿಕೆ, ತೆಂಗಿನಕಾಯಿ, ಬಾಳೆಹಣ್ಣು, ಐಸ್ ಕ್ರೀಂ, ಕಬ್ಬಿನಹಾಲು ಮಾರುವವರು ಅಕ್ರಮಿಸಿಕೊಂಡಿದ್ದರು. ಜಾತ್ರೆ ಹಮ್ಮಿಕೊಳ್ಳಲಾಗಿತ್ತು.ವೃಷಭಪುರಿ ಸಂಸ್ಥಾನದ ವತಿಯಿಂದ ವತಿಯಿಂದ ಆಗಮಿಸಿದ ಜನತೆಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ದೇವಾಲಯ, ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥವನ್ನು ಹೂ ಹಾಗೂ ಧ್ಜಜ ಪತಾಕೆಗಳಿಂದ ಶೃಂಗರಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.