ಬುಧವಾರ, ಅಕ್ಟೋಬರ್ 16, 2019
26 °C

ಸಂಭ್ರಮದ ಬ್ರಹ್ಮರಥೋತ್ಸವ

Published:
Updated:

ಹಾಸನ: ಹಾಸನ ತಾಲೂಕ್ಲಿನ ಬೈಲಹಳ್ಳಿಯಲ್ಲಿ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ್ಮೀಜನಾರ್ದನಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು.ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಭಕ್ತರು ರಥವನ್ನು ಎಳೆದು ಹರಕೆ ತೀರಿಸಿಕೊಂಡರು. ಬ್ರಹ್ಮೋತ್ಸವದ ಅಂಗವಾಗಿ  ಜ.10 ರಿಂದ 27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಶುಕ್ರವಾರ ಬೆಳಿಗ್ಗೆಯಿಂದ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪ್ರದಕ್ಷಿಣೆ ಮಾಡಲಾಯಿತು.

ವಿಶೇಷವಾಗಿ ಅಲಂಕೃತಗೊಂಡಿದ್ದ ರಥದಲ್ಲಿ ಮೂರ್ತಿಯನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

 

Post Comments (+)