ಬುಧವಾರ, ಮೇ 19, 2021
27 °C

ಸಂಭ್ರಮದ ಬ್ರಹ್ಮಲಿಂಗೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಗೋಳ: `ಜಯಬ್ರಹ್ಮಲಿಂಗೋಂ... ಲಕ್ಷ್ಮೀನಾರಸಿಂಹೋಂ...' ಎಂಬ ಘೋಷಣೆ  ಮುಗಿಲು ಮುಟ್ಟುವಂತೆ ಎಲ್ಲೆಡೆ ಮೊಳಗುತ್ತಿತ್ತು. ಲಿಂಗ, ಜಾತಿ, ವಯೋಮಾನ ಭೇದವಿಲ್ಲದೇ ಭಕ್ತರು  ಬ್ರಹ್ಮಲಿಂಗೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.ಭಾನುವಾರ ನಡೆದ ಈ ಉತ್ಸವಕ್ಕೆ ಕರಿಬಂಡಿ ಉತ್ಸವವೂ ಅಂತಾ ಕರೆಯುತ್ತಾರೆ. ಪ್ರತಿವರ್ಷ ಕಾರಹುಣ್ಣಿವೆಯ ಮೂಲಾ ನಕ್ಷತ್ರದ ದಿನದಂದು ನಡೆಯುತ್ತದೆ. ಇಂದು ನಡೆದ ಈ ಬ್ರಹ್ಮಲಿಂಗೋತ್ಸವಕ್ಕೆ ಸಹಸ್ರ ಸಹಸ್ರ ಭಕ್ತರು ಸಾಕ್ಷಿಯಾದರು.ಎರಡು ಬಂಡಿಗಳಲ್ಲಿ ಒಟ್ಟು 13 ವೀರಗಾರರು ವೈವಿಧ್ಯಮಯ ಪೋಷಾಕುಗಳನ್ನು ಧರಿಸಿಕೊಂಡು ನಿಂತಿದ್ದರು. ಕೈಯಲ್ಲಿ ಹತಾರಿ, ತಲೆಗೆ ಮೈಸೂರು ಪೆಟಾ, ಹಣೆಯಲ್ಲಿ ಭಸ್ಮ, ಗಂಧ, ಮೇಲೆ ಪಿಂತಾಂಬರವನ್ನು ಧರಿಸಿದ್ದರು. ಬ್ರಹ್ಮಲಿಂಗ ದೇವರನ್ನು ಪ್ರದಕ್ಷಿಣೆ ಹಾಕಿ ಮತ್ತೆ ಕರೋಗಲ್ಲ ಮನೆತನದವರೆಗೆ ಹೋದರು. ನಂತರ ಬರಗಾರಲಿನಿಂದ ಮತ್ತೆ ಬ್ರಹ್ಮಲಿಂಗ ದೇವರ ದರ್ಶನಕ್ಕೆ ಆಗಮಿಸಿದರು. ಆಗ ಹರಕೆ ಹೊತ್ತ ಭಕ್ತರು ದೀರ್ಘದಂಡ (ದೀಡ್) ನಮಸ್ಕಾರ ಹಾಕಿದರು. ಸಕ್ಕರೆ ಮತ್ತು ಹಣ್ಣುಕಾಯಿ ಬ್ರಹ್ಮಲಿಂಗ ದೇವರಿಗೆ ನೈವೇದ್ಯ ಅರ್ಪಿಸಿ ಪ್ರಸಾದವನ್ನು ಸ್ವೀಕರಿಸಿದರು.ಈ ಬಾರಿ ಮಳೆ ಚನ್ನಾಗಿ ಆಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ರೈತರು ತಮ್ಮ ಮಿತ್ರ ಎತ್ತುಗಳನ್ನು ಶೃಂಗಾರಗೊಳಿಸಿಕೊಂಡು ಬ್ರಹ್ಮಲಿಂಗ ದೇವರ ಪ್ರದಕ್ಷಿಣೆ ಮಾಡಿಸಿದರು. ಉಳ್ಳವರು ಶಹನಾಯಿ, ಬಾಜಾ ಭಜಂತ್ರಿ ವಾದ್ಯಗಳೊಂದಿಗೆ ಬಂದು ದೇವರ ದರ್ಶನ ಪಡೆದರು.

ಮುಂಜಾನೆ ಬ್ರಹ್ಮಲಿಂಗದೇವರಿಗೆ ಅಭಿಷೇಕ, ವೇದಮಂತ್ರ, ವಿಶೇಷ ಅಲಂಕಾರ ಮಾಡಲಾಯಿತು. ಭಕ್ತರು  ಬ್ರಹ್ಮಲಿಂಗನ ದರ್ಶನ ಮಾಡಿಕೊಂಡು ಪುನೀತ ಭಾವ ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.