ಮಂಗಳವಾರ, ಮೇ 18, 2021
22 °C

ಸಂಭ್ರಮದ ಬ್ರಹ್ಮಾನಂದರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ತಾಲ್ಲೂಕಿನ ಭೈರನಹಟ್ಟಿಯಲ್ಲಿ ಗುರು ಬ್ರಹ್ಮಾನಂದರ ರಥೋತ್ಸವವು ಸಕಲ ವಾದ್ಯಮೇಳದೊಂದಿಗೆ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ  ಸ್ವಾಮೀಜಿಗಳ ನೇತೃತ್ವದಲ್ಲಿ  ಸಂಭ್ರಮದೊಂದಿಗೆ ನೆರವೇರಿತು. ಸಾಮಾನ್ಯವಾಗಿ ಪ್ರತಿ ದೇವರ ರಥದಲ್ಲಿ ಸಂಪ್ರದಾಯದಂತೆ ಪುಷ್ಪ, ಮಾಲೆ, ತಳಿರು ತೋರಣಗಳು ತುಂಬಿ ದರೆ ಆದರೆ ಈ ರಥದಲ್ಲಿ ಅದರೊಂದಿಗೆ  ಕನ್ನಡ  ಧ್ವಜ ರಾರಾಜಿಸಿದ್ದು ವಿಶೇಷವಾಗಿತ್ತು.ಇದರ ಮೂಲಕ  ಬ್ರಹಾನಂದ ಜಾತ್ರೆಯಲ್ಲಿ ಭೈರನಹಟ್ಟಿ ಗ್ರಾಮಸ್ಥರು ಕನ್ನಡಾಭಿಮಾನ ಮೆರೆದದ್ದು ಕಂಡು ಬಂತು. ಈ ಸಂದರ್ಭದಲ್ಲಿ ಬಿ.ಬಿ.ಐನಾಪೂರ, ಧರ್ಮರಾಜಪ್ಪ ತೆಗ್ಗಿನಮನಿ,ಮ ಮುದಕಣ್ಣ ಮೊರಬದ, ಹನಮಂತ  ಸಂಗಟಿ, ಬಸಪ್ಪ ನರಸಾಪೂರ ಸೇರಿಂದಂತೆ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.