ಸೋಮವಾರ, ಮೇ 17, 2021
28 °C

ಸಂಭ್ರಮದ ಮಂಟೇಸ್ವಾಮಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಪಟ್ಟಣ ವ್ಯಾಪ್ತಿಯ ಹೊಸ ಅಣಗಳ್ಳಿಯಲ್ಲಿ ಮಂಗಳವಾರ ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ ಕಂಡಾಯಗಳ ಉತ್ಸವ ವಿಜೃಂಬಣೆಯಿಂದ ನೆರವೇರಿತು.ಪಟ್ಟಣದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ವಾಟರ್ ಟ್ಯಾಂಕ್ ಆವರಣದಲ್ಲಿ ಹೂ-ಹೊಂಬಾಳೆ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಅಣಗಳ್ಳಿ ಸಿದ್ದಪ್ಪಾಜಿ ಗುಡ್ಡರು, ಗ್ರಾಮದ ಯಜಮಾನರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯು ಡಾ. ರಾಜ್‌ಕುಮಾರ್ ರಸ್ತೆ ಸೇರಿದಂತೆ ಇತರೆ ರಸ್ತೆಗಳ ಮೂಲಕ ಅಣಗಳ್ಳಿಗೆ ಸಾಗಿತು.ಅಣಗಳ್ಳಿಯ ಎಲ್ಲಾ ಬೀದಿಗಳನ್ನು ತಳಿರು-ತೋರಣಗಳು, ವರ್ಣಮಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ಯಜಮಾನರುಗಳಾದ ನಾಗಬಸವ, ನಾರಾಯಣಿ, ಆರ್. ಮಹದೇವು, ಮರಿಸಿದ್ದ, ಚಿಕ್ಕಣ್ಣ, ಪುಟ್ಟರಾಜು, ನಗರಸಭಾ ಸದಸ್ಯ ರಾಮಕೃಷ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.