ಮಂಗಳವಾರ, ಮೇ 24, 2022
31 °C

ಸಂಭ್ರಮದ ಮಧ್ಯೆ ಬಸವಣ್ಣನ ಪುತ್ಥಳಿ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ಜಗಜ್ಯೋತಿ ಬಸವಣ್ಣನ ವಚನಗಳು ಸಾರ್ವಕಾಲಿಕ ಸತ್ಯಗಳು. ಕರ್ಮ ಮತ್ತು ಕಾಯಕವನ್ನು ಆರಾಧಿಸು ವುದನ್ನು ರೂಢಿಸಿದ ಮಹಾಯೋಗಿ ಅಣ್ಣ ಎಂದು ಜಿ.ಪಂ. ಸದಸ್ಯ ಹಣಮಂತ ನಿರಾಣಿ ಹೇಳಿದರು.ನಗರದಲ್ಲಿ  ಬುಧವಾರ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತ ನಾಡಿದರು.ಬಸವ ತತ್ವಗಳು ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿವೆ. ಅಂಥ ಮಹಾಯೋಗಿಯ ತತ್ವ-ಆದರ್ಶಗಳು ಉಳಿಯಬೇಕಾದರೆ ಅಣ್ಣನ ವಿಚಾರ ಗಳನ್ನು ನಿತ್ಯಜೀವನದಲ್ಲಿ ಮೈಗೂಡಿಸಿಕೊ ಳ್ಳಬೇಕು ಎಂದು ಅವರು ಹೇಳಿದರು.ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಸವಣ್ಣನ ನಾಡಿನ ಜನರು ಕೂಡಾ ಭಕ್ತಿ ಭಾಂಡಾರಿಗಳು. ಅಧುನಿಕ ಯುಗ ದಲ್ಲೂ ಭಕ್ತಿ, ಗೌರವಾದರಗಳು ಜೀವಂತ ವಾಗಿವೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ಅವರು ಹೇಳಿದರು.ಮುಧೋಳ ಗವಿಮಠ-ವಿರಕ್ತಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹತ್ತು ವರ್ಷಗಳ ಹಿಂದೆ ಬಸವೇಶ್ವರ ವೃತ್ತವನ್ನು ಇಲ್ಲೇ ನಿರ್ಮಿಸಬೇಕೆಂದು ಸಂಕಲ್ಪ ಮಾಡಲಾಯಿತು. ಅದಕ್ಕೆ ನೂರೆಂಟು ವಿಘ್ನಗಳು ಬಂದವು. ಈಗ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ ಎಂದರು.ಜಮಖಂಡಿ ರಸ್ತೆಯ ನಿರಾಣಿಯವರ ಮನೆಯಿಂದ ಬೆಳಿಗ್ಗೆ ಹೊರಟ ಶೋಭಾ ಯಾತ್ರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತ, ಉತ್ತರ ಗೇಟ್, ತಂಬಾಕ ಚೌಕ್, ಗಾಂಧಿವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿತು.ತೆರೆದ ವಾಹನದಲ್ಲಿ ಅಣ್ಣನ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪನಾ ಸ್ಥಳಕ್ಕೆ ತರುವಾಗ ಜನರು ಭಕ್ತಿಭಾವದಿಂದ ವೀಕ್ಷಿಸಿದರು. ಕ್ರೇನ್ ಮೂಲಕ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವಾಗ ಜನರು ಉಸಿರು ಬಿಗಿಹಿಡಿದು ನಿಂತು ನೋಡಿದರು.ಮೆರವಣಿಗೆಯಲ್ಲಿ ಸಮಾಜದ ಗಣ್ಯರಾದ ರಾಚಪ್ಪ ಕರೇಹೊನ್ನ, ಎಸ್.ಆರ್.ಢಂಗಿ, ರಾಮನಗೌಡ ನಾಡ ಗೌಡ, ಶಂಕ್ರಪ್ಪ ಗೋಸಾರ, ಮಹ ದೇವಪ್ಪ ಹೊಸಕೋಟಿ, ಎಸ್.ಪಿ.ದಾನಪ್ಪ ಗೋಳ, ಗಿರೀಶ ಮೇತ್ರಿ, ಮಹಾಲಿಂಗ ಬಳಿಗಾರ, ಅನೀಲ ಪೂಜಾರಿ, ದಾನೇಶ ತಡಸಲೂರ, ಗಿರಿಮಲ್ಲಪ್ಪ ತೇಲಿ, ಗುರು ಪಾದಪ್ಪ ಯರಗಟ್ಟಿ, ದುಂಡಪ್ಪ ಯರಗಟ್ಟಿ, ಶಿವು ಸ್ವತಂತ್ರಮಠ, ಎಸ್.ಬಿ.ಅಕ್ಕಿಮರಡಿ, ಪ್ರಕಾಶ ವಸ್ತ್ರದ, ಕಲ್ಲಪ್ಪ ಸಬರದ, ಎಂ.ಎಸ್.ನಾಯಕ ವಾಡಿ, ಸತೀಶ ಬಂಡಿವಡ್ಡರ ಮುಂತಾದವರು ಭಾಗವಹಿಸಿದ್ದರು.

ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗ ಮೇಶ ನಿರಾಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಮಹಾತ್ಮಾ ಗಾಂಧೀಜಿಯವರ ಕಂಚಿನ ಪುತ್ಥಳಿಗಳನ್ನು ಕೂಡಾ ನಿರ್ಮಿ ಸಲಾಗುತ್ತಿದ್ದು, ಈ ಎಲ್ಲ ಮೂರ್ತಿ ಗಳನ್ನು ಒಂದೇ ಬಾರಿಗೆ ದೊಡ್ಡ ಸಮಾರಂಭ ಮಾಡಿ ಅನಾವರಣ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.ಶಿವಾನಂದ ಹಾಡಕರ, ಅಶೋಕ ಹೊಂಡಾ ಕಾರ್ಯಕ್ರಮ ನಿರೂ ಪಿಸಿದರು. ಮಹಾಲಿಂಗ ಬಳಿಗಾರ ವಂದಿ ಸಿದರು.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.