ಗುರುವಾರ , ಏಪ್ರಿಲ್ 22, 2021
29 °C

ಸಂಭ್ರಮದ ರಮ್ಜಾನ್: ಸಾಮೂಹಿಕ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಈದ್ -ಉಲ್-ಫಿತರ್ ಹಬ್ಬವನ್ನು ನಗರದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಲಾಯಿತು. ನಗರದ ಜುಮ್ಮ ಮಸೀದಿಯಿಂದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಶಾಹಿ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಶ್ರೀಶೈಲಪ್ಪ ಬಿದರೂರ, ಮಾಜಿ ಸಚಿವ ಎಚ್.ಕೆ.ಪಾಟೀಲ, ನಗರಸಭೆ ಸದಸ್ಯ ಸಿರಾಜ್ ಬಳ್ಳಾರಿ ಸೇರಿದಂತೆ ಇತರರು ಪ್ರಾರ್ಥನೆ ಸಲ್ಲಿಸಿದರು.

 

ಬೆಳಿಗ್ಗೆಯಿಂದಲೇ ಮಕ್ಕಳು, ಹಿರಿಯರು ಹೊಸ ಬಟ್ಟೆ ಉಟ್ಟುಕೊಂಡು ಈದ್ಗಾ ಮೈದಾನದಲ್ಲಿ  ಈದ್ ನಮಾಜ್ ಮಾಡಿದರು. ಈದ್ ಮುಬಾರಕ್ ಎಂದು ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು.ಡಂಬಳ ನಾಕಾದ ಈದ್ಗಾ ಮೈದಾನ, ಬೆಟಗೇರಿ ಈದ್ಗಾ ಮೈದಾನಗಳಲ್ಲಿ ಸಾವಿರರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ನಮಾಜ್ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಜನಪ್ರತಿನಿಧಿಗಳು ಶುಭಾಶಯ ಕೋರಿದರು. ಡಂಬಳ ನಾಕಾದಲ್ಲಿ ಹೆಚ್ಚು ಜನರು ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಗಮಿಸಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯವಸ್ತಗೊಂಡಿತ್ತು. ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ನಗರದಲ್ಲಿ ಕೆಲ ಕಾಲ ಮಳೆ ಸುರಿಯಿತು. ಆದರೂ ಪ್ರಾರ್ಥನೆಗೆ ಯಾವುದೇ ತೊಂದರೆ ಯಾಗಲಿಲ್ಲ. ನಗರದ ಮಸೀದಿಗಳಲ್ಲೂ ಪ್ರಾರ್ಥನೆ ನಡೆಯಿತು.ಮನೆಯಲ್ಲಿ ಶೀರ್‌ಕುರ್ಮಾ (ಸುರಕುಂಬಾ) ಎಂಬ ಪಾಯಸ ತಯಾರಿಸಿ ನೆರೆಹೊರೆಯವರಿಗೆ ವಿತರಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.ಲಕ್ಷ್ಮೇಶ್ವರ ವರದಿ

ಲಕ್ಷ್ಮೇಶ್ವರ:
ಕಳೆದ ಒಂದು ತಿಂಗಳಿಂದ ಆಚರಿಸುತ್ತ ಬಂದಿದ್ದ ರಮ್ಜಾನ್ ಮಾಸಕ್ಕೆ ಸೋಮವಾರ ತೆರೆ ಬಿದ್ದಿತು.

 ರಮ್ಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ರಮ್ಜಾನ್ ಹಬ್ಬದ ವಿಶೇಷ ಭಕ್ಷ್ಯವಾದ ಸುರಕುಂಭ ಸಿಹಿ ಪದಾರ್ಥ ತಮ್ಮ ಬಂಧು ಮಿತ್ರರೊಡನೆ ಹಂಚಿಕೊಂಡು ಸವಿದರು.ಮುಂಡರಗಿ ವರದಿ

ಮುಂಡರಗಿ:
ಪವಿತ್ರ ರಮ್ಜಾನ್ ಹಬ್ಬದ ನಿಮಿತ್ತ ತಾಲ್ಲೂಕಿನ ಮುಸ್ಲಿಂರು  ಸೋಮವಾರ  ಪಟ್ಟಣದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ  ಶುಭಾಶಯ ವಿನಿಮಯ ಮಾಡಿಕೊಂಡರು.ಶಂಶುದ್ದೀನ ಹಾರೋಗೆರಿ, ಎ.ಪಿ.ದಂಡಿನ, ಡಿ.ಎಂ.ಕಾತರಕಿ, ಎಸ್.ಡಿ.ಮಕಾಂದಾರ, ಎಂ.ಜಿ.ವಡ್ಡಟ್ಟಿ, ರಾಜಾಭಕ್ಷಿ ಬೆಟಗೇರಿ, ಅಮೀನಸಾಬ್ ಬಿಸನಳ್ಳಿ, ಹಾಜಿ ಅಲ್ಲಾಭಕ್ಷಿ ಬನಿಗೋಳ, ಶಾನು ಮುಲ್ಲಾ, ಮೋದಿನಸಾಬ್ ಡಂಬಳ, ಹಿಂದು ಮುಖಂಡರಾದ ಕೆ.ವಿ.ಹಂಚಿನಾಳ, ಹೇಮಗಿರೀಶ ಹಾವಿನಾಳ, ಹೇಮಂತಗೌಡ ಪಾಟೀಲ, ರಾಮು ಕಲಾಲ, ಬಸವರಾಜ ಬಿಸನಳ್ಳಿ, ರಜನೀಕಾಂತ ದೇಸಾಯಿ, ರಾಮಕೃಷ್ಣ ದೊಡ್ಡಮನಿ ಮೊದಲಾದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.ಗಜೇಂದ್ರಗಡ ವರದಿ

ಗಜೇಂದ್ರಗಡ:
ಸೋಮವಾರ ರಮ್ಜಾನ್ ಹಬ್ಬದ ಪ್ರಯುಕ್ತ ಇಲ್ಲಿನ ಕುಷ್ಟಗಿ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ  ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಸಬ್ದಾರ್ ಸಾಬ್  ದೇವ ಮಾರ್ಗದಲ್ಲಿ ಮನಬಿಚ್ಚಿ ಉತ್ಸಾಹದಿಂದ ಖರ್ಚು ಮಾಡಿರಿ. ಸಂಕುಚಿತತೆಇರಬಾರದು ಎಂದು ಹೇಳಿದರು. ಸಂಕುಚಿತತೆ ಹಾಗೂ ಜಿಪುಣತನದಿಂದ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು  ಕಿವಿಮಾತು ಹೇಳಿದರು.

  

 ಹಣವನ್ನು ಒಳ್ಳೆಯ ಮಾರ್ಗದಲ್ಲಿ ವ್ಯಯಿಸಿರಿ. ನ್ಯಾಯದ ಮಾರ್ಗದ  ಹಣವನ್ನು ಅಲ್ಲಾ ಸ್ವೀಕರಿಸುತ್ತಾನೆ. ಅನ್ಯಾಯದಿಂದ ಬದುಕು ನಡೆಸುವುದನ್ನು ದೇವರು ಮೆಚ್ಚುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. 

  

 ಅಂಜುಮನ್ ಕಮಿಟಿಯ ಅಧ್ವಕ್ಷ  ಎಂ.ಹೆಚ್‌ಕೋಲಕಾರ್, ಹಸನ್‌ಸಾಬ ತಟಗಾರ್, ಮೌಲಾನಾ ಇಜ್ರಾಯಿಲ್, ಮೌಲಾನಾಖಲೀಲ ಖಾಜಿ, ಪೀರಾ ಮಕಾನದಾರ, ಎಂ.ಎಸ್.ಮಕಾನದಾರ, ಎಂ.ಕೆ.ಹಿರೇಹಾಳ, ಅಫಜಲ್‌ಖಾನ್ ಲೋದಿ, ಎಂ.ಎಸ್.ಮೂಲಿಮನಿ, ಎಂ.ಬಿ. ಕಂದಗಲ್, ಯೂಸುಫ್ ಅತ್ತಾರ್, ಪಿ.ಕೆ.ಭಾಗವಾನ, ಬಿ.ಕೆ.ದಿಂಡವಾಡ ಸಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.ಶಿರಹಟ್ಟಿ ವರದಿ

ಶಿರಹಟ್ಟಿ:
ಎಲ್ಲ ಧರ್ಮಗಳ ಸಾರ ಒಂದೇ. ಅದನ್ನು ಅರಿತು ನಡೆದು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹಾಜಿ ಅಬ್ದುಲ್ ಲತೀಫ್ ಕತೀಬ ಹೇಳಿದರು.ಸೋಮವಾರ ಪವಿತ್ರ ರಮ್ಜಾನ್  ಹಬ್ಬದ ಅಂಗವಾಗಿ ಜರುಗಿದ ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಿ, ಎಲ್ಲ ಧರ್ಮಗಳು ಅಹಿಂಸೆ, ತ್ಯಾಗ, ಸಮಾನತೆಯ ಅಂಶಗಳನ್ನು ಬಿಂಬಿಸುತ್ತವೆ. ಅದನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ.  ಮಹಮ್ಮದ್ ಪೈಗಂಬರರ ಜೀವನ ಇದಕ್ಕೆ ನಿದರ್ಶನ ಬದುಕಿನುದ್ದಕ್ಕೂ ಸನ್ಮಾರ್ಗಗಳ ಮೂಲಕ ಪ್ರಪಂಚಕ್ಕೆ ಮಹಾಮಾನವತಾವಾದಿ ಎನಿಸಿದ್ದಾರೆ. ಅವರ ಆದರ್ಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಡಿ ಮಾಗಡಿ. ಹಾಜಿ ಅಬ್ದುಲ್ ಗನಿ ಕುಬುಸದ, ಹಾಜಿ ಅಮ್ಜದ್‌ಸಾಬ ಮಾಗಡಿ, ಹಾಜಿ ಮಹಮ್ಮದ್ ಗೌಸ, ಹಾಜಿ ಬಾಬುಸಾಬ ಮನಿಯಾರ, ಹಾಜಿ ಅಲ್ಲಾಭಕ್ಷ ಕುಬುಸದ, ಮಹಮ್ಮದ್ ಇಸಾಕ್ ಆದ್ರಳ್ಳಿ, ಮಹಮ್ಮದ್ ಗೌಸ ಮುಳಗುಂದ, ಕೆಎಫ್. ರಮಜಾನವರ, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಕೆ. ಮುಳಗುಂದ, ಮಾಜಿ ಅಧ್ಯಕ್ಷ ಎ.ಎ. ಪಠಾಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಶೌಕತ್ ಬುವಾಜಿ ಬಾಬುಸಾನ ತಹಶೀದಾರ್,

ರಫೀಕ್. ಎ.ಎ. ಮಕಾನದಾರ ಬುಡನಶ್ಯಾ ಮಕಾನದಾರ, ನಜೀರ್ ಡಂಬಳ, ಅಕ್ಬರ ಯಾದಗಿರಿ, ಅರೀಫ್ ಪಠಾಣ, ನ್ಯಾಯವಾದಿ ಬೇವಿನಮರದ, ಆದ್ರಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಮೀಯಾ ಮಸೀದಿಯಿಂದ ಹೊರಟು ನಂತರ ಹರಿಪುರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ನರಗುಂದ ವರದಿ

ನರಗುಂದ:
ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ರಮ್ಜಾನ್ ಹಬ್ಬವನ್ನು ಸೋಮವಾರ ಹಿಂದೂ -ಮುಸ್ಲಿಂ ಬಾಂಧವರು  ಭಾವೈಕ್ಯತೆಯಿಂದ  ಆಚರಿಸಿದರು.ಪಟ್ಟಣದಲ್ಲಿ ಮುಸ್ಲಿಂ  ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ   ಬೃಹತ್  ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಪರಸ್ಪರ ಶುಭಾಶಯ  ವಿನಿಮಯ ಮಾಡಿಕೊಂಡರು.  ರಮ್ಜಾನ್ ಹಬ್ಬದ ಮಹತ್ವವನ್ನು ಈ ಸಂದರ್ಭದಲ್ಲಿ ಸಾರಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಆರ್‌ಯಾವಗಲ್, ರಾಜು ಕಲಾಲ, ಚಂಬಣ್ಣ ವಾಳದ, ವಿಠ್ಠಲ ಶಿಂಧೆ, ಖಾಜಿ ಸಹೋದರರು, ಸಕಲಿ, ಸಮದ್ ಮುಲ್ಲಾ, ಮಯಿಬೂಬ್ ಯರಗಟ್ಟಿ,  ಫಕ್ರುಸಾಬ ಇಂದಗಿ,  ಎಂ.ಎಂ.ಚಿಕ್ಕೋಡಿ, ಬಿ.ಎ.ನದಾಫ್,  ಅಬ್ಬಾಸ್ ನಾಲಬಂಧ, ಅಕ್ತರ ಪಠಾಣ, ಸಿಕಂದರ ಪಠಾಣ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.