ಸಂಭ್ರಮದ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ

7

ಸಂಭ್ರಮದ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ

Published:
Updated:

ಕೆಂಗೇರಿ: ಮಾಗಡಿ ರಸ್ತೆಯ ಕನ್ನಲಿ ಗ್ರಾಮದಲ್ಲಿ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.ಗ್ರಾಮದ ರಾಜಬೀದಿ ಹಾಗೂ ಮನೆಯಂಗಳವನ್ನು ಮಹಿಳೆಯರು ರಂಗೋಲಿ ಹಾಕಿ ಸಿಂಗರಿಸಿದ್ದರು. ಸ್ವಾಮಿಯನ್ನು ಹೊತ್ತ ರಥಕ್ಕೆ ಆರತಿ ಎತ್ತಿ ಭಕ್ತಿಯಿಂದ ನಮಿಸಿದರು.ಜನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ನಡೆದ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಬೀದಿಯಲ್ಲಿ ಸಾಗಿತು. ಅರ್ಚಕರು ಅಗ್ನಿಕುಂಡ ಪ್ರವೇಶ ಮಾಡಿದ ನಂತರ ಮಹಾಮಂಗಳಾರತಿ ನಡೆಯಿತು.ರಾತ್ರಿ ಹುಲಿ ವಾಹನೋತ್ಸವ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry