ಸಂಭ್ರಮದ ವೀರಭದ್ರೇಶ್ವರ ಜಾತ್ರೆ

ಸೋಮವಾರ, ಮೇ 20, 2019
30 °C

ಸಂಭ್ರಮದ ವೀರಭದ್ರೇಶ್ವರ ಜಾತ್ರೆ

Published:
Updated:

ನರೇಗಲ್: ಜಾತ್ರೆ, ಉತ್ಸವ, ಹಬ್ಬಗಳು ಜನರಲ್ಲಿ ಭಾವೈಕ್ಯತೆ ಮೂಡಿಸುವು ದರೂಂದಿಗೆ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುತ್ತವೆ ಎಂದು ನಿಡಗುಂದಿ ಕೊಪ್ಪದ ಶಿವಬಸವ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಶ್ರಾವಣಮಾಸದ ಶುಭ ದಿನಗಳಲ್ಲಿ ದಾಂಪತ್ಯಕ್ಕೆ ಕಾಲಿಡುತ್ತಿರುವ ದಂಪತಿಗಳು ಶುದ್ಧ ಜೀವನ ನಡೆಸಲು ಮುಂದಾಗಬೇಕು. ಶಿವಶರಣರು ಹಾಕಿಕೂಟ್ಟ ಸನ್ಮಾರ್ಗದಲ್ಲಿ ನಡೆದು ಜೀವನವನ್ನು ಸಾರ್ಥಕ ಪಡೆಸಿಕೂಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಿವಪ್ಪ ಕುಷ್ಟಗಿ ಮಾತನಾಡಿ, ಶರಣರ ಸಮ್ಮುಖದಲ್ಲಿ ನಡೆದಿರುವ ಸಾಮೂಹಿಕ ವಿವಾಹಗಳು ಸರಳ ಸುಂದರ ಜೀವನಕ್ಕೆ ನಾಂದಿಯಾಗಬೇಕು ಎಂದು ಹೇಳಿದರು.ಎಪಿಎಂಸಿ ಸದಸ್ಯ ಬಾಳಪ್ಪ ಸೊಮಗೂಂಡ, ಬಸಪ್ಪ ಲಕ್ಕನಗೌಡರ, ಸುರೇಶ ಕಳಕೊಣ್ಣವರ, ಕಳಕಪ್ಪ ಹೂನವಾಡ ಮತ್ತು ವೀರಭದ್ರೇಶ್ವರ, ಗ್ರಾಮ ದೇವತೆ ಟ್ರಸ್ಟ್‌ನ ಸದಸ್ಯರು ಮತ್ತಿತರರು ಹಾಜರಿದ್ದರು. ಶರಣಪ್ಪ ಹಕ್ಕಿ ಸ್ವಾಗತಿಸಿದರು. ವಕೀಲ ಸೋಮು ಲಕ್ಕನಗೌಡ ವಂದಿಸಿದರು.ರಥೋತ್ಸವ: ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ನಡೆಯಿತು. ನಂತರ ಕಳಸ ಹಾಗೂ ನಂದಿಕೋಲು ಮೆರವಣಿಗೆ, ಅಗ್ನಿಕುಂಡ ಹಾಯುವ ಕಾರ್ಯಕ್ರಮ ಜರುಗಿತು. ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry