ಭಾನುವಾರ, ಏಪ್ರಿಲ್ 18, 2021
33 °C

ಸಂಭ್ರಮದ ಶಂಭುಲಿಂಗೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ಇಲ್ಲಿಯ ಇತಿಹಾಸ ಪ್ರಸಿದ್ಧ ಶಂಭುಲಿಂಗೇಶ್ವರಸ್ವಾಮಿಯ ಮಹಾ ರಥೋತ್ಸವವು ಸೋಮವಾರ ಸಂಜೆ ಸಡಗರ ಸಂಭ್ರಮದಿಂದ ನಡೆಯಿತು.ದೇವಸ್ಥಾನದಲ್ಲಿ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ರಾರಾವಿ ವೀರೇಶಯ್ಯಸ್ವಾಮಿ ಕಾಶ್ಯಯ ಅವರ ವಡವು ಮತ್ತು ತೆಕ್ಕಲಕೋಟೆ ರಾಚಯ್ಯಸ್ವಾಮಿ ಅವರ ಸಮೇಳದೊಂದಿಗೆ ಅಗ್ನಿಕುಂಡ ಕಾರ್ಯಕ್ರಮ ಜರುಗಿತು.



ನಂತರ ಭಕ್ತರು ಅಗ್ನಿಕುಂಡದಲ್ಲಿ ಬೆಂಕಿ ತುಳಿದು ಹರಕೆ ತೀರಿಸಿದರು. ಸ್ವಾಮಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ಶಂಭುಲಿಂಗೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಮಡಿ ತೇರಿನ ಸೇವೆ ನಡೆಯಿತು.ಪಟ್ಟಣದ ಸುತ್ತಮುತ್ತಲಿನ ಭಕ್ತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿತು ಸ್ವಾಮಿಯ ದರ್ಶನ ಪಡೆದರು.



ಸಂಜೆ ದೇವಸ್ಥಾನದಿಂದ ವಿವಿಧ ವಾದ್ಯಗಳ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದ ಬಳಿ ತಂದು ನಂತರ ಮೂರ್ತಿಯನ್ನು ಅರ್ಚಕರು ರಥದಲ್ಲಿ ಪ್ರತಿಷ್ಠಾಪಿಸಿದರು. ಬಳಿಕ ಸಂಜೆ ಬಣ್ಣ ಬಣ್ಣದ ಹೂ, ಹಸಿರು ತೋರಣಗಳಿಂದ ಶೃಂಗರಿಸಿದ ರಥವನ್ನು ಭಕ್ತರು ಸ್ವಾಮಿಯ ಜಯಘೋಷ ಮಾಡುತ್ತಾ ಹಗ್ಗ ಹಿಡಿದು ರಥವನ್ನು ಎಳೆದು ಪುನೀತರಾದರು. ರಥಕ್ಕೆ ಹೂ ಹಣ್ಣು ಎಸೆದು ಹರಕೆ ತೀರಿಸಿದರು.ಸಿರುಗುಪ್ಪ, ದೇಶನೂರು, ಗಡ್ಡೆ ವಿರುಪಾಪುರ, ಇಬ್ರಾಂಪುರ, ಬಾಗವಾಡಿ ಮುಂತಾದ ಗ್ರಾಮಗಳ  ಭಕ್ತರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.