ಮಂಗಳವಾರ, ನವೆಂಬರ್ 19, 2019
29 °C

ಸಂಭ್ರಮದ ಸಿದ್ದೇಶ್ವರ ರಥೋತ್ಸವ

Published:
Updated:

ರಾಣೆಬೆನ್ನೂರು: ಇಲ್ಲಿನ ಸಿದ್ದೇಶ್ವರ ನಗರದ ಸಿದ್ದೇಶ್ವರ ದೇವಸ್ಥಾನದ ರಥೋತ್ಸವ ಸಕಲ ವಾದ್ಯಗಳೊಂದಿಗೆ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.



ರಥೋತ್ಸವವು ಸಿದ್ದೇಶ್ವರ ನಗರದಿಂದ ಪ್ರಾರಂಭವಾಗಿ ಕುರುಬಗೇರಿ ಕ್ರಾಸ್‌ವರೆಗೆ ಸಾಗಿ ಮತ್ತೆ ಮರಳಿ ಶಿದ್ದೇಶ್ವರ ದೇವಸ್ಥಾನದ ಆವರಣಕ್ಕೆ ಸಾಗಿತು. ಸಿದ್ದೇಶ್ವರ ಮಹಾರಾಜ್ ಕೀ ಜೈ, ಹರಹರ ಮಹಾದೇವ ಎಂಬ ಭಕ್ತರ ಜೈಘೋಷ ಮುಗಿಲು ಮುಟ್ಟುವಂತಿತ್ತು.ವರುಣನ ಗುಡುಗು ಸಿಡಿಲು, ಮಿಂಚುಗಳ ಮಧ್ಯೆಯೇ ರಥೋತ್ಸವ ನಡೆಯಿತು. ಸ್ವಲ್ಪ ಹೊತ್ತು ಮಳೆ ಹನಿ ಸುರಿಯಿತು.



ಶಂಕ್ರಪ್ಪ ಬುರಡೀಟ್ಟಿ, ಮಾಕನೂರು, ಶೇಖಪ್ಪ ಹೊಸಗೌಡ್ರ, ರಮೇಶ ಗುತ್ತಲ, ಸೋಮು ಗೌಡಶಿವಣ್ಣನವರ, ಹೇಮಣ್ಣ ಮಾಕನೂರು, ಕರಬಸಪ್ಪ ಮಾಕನೂರು, ಗಡ್ಡದಗೂಳಿ, ಮಂಜುನಾಥ ಗೌಡಶಿವಣ್ಣನರ, ಆರ್. ಶಂಕರ್, ಪರಮೇಶಪ್ಪ ಗೂಳಣ್ಣನವರ, ನರಸಗೊಂಡರ, ಬಸವರಾಜ ಲಕ್ಷ್ಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)