ಶುಕ್ರವಾರ, ಜೂನ್ 25, 2021
26 °C
ಸೀಬಾರದಲ್ಲಿ ದನಗಳ ಜಾತ್ರೆ ಆರಂಭ

ಸಂಭ್ರಮದ ‘ಮೈಲಾರಲಿಂಗೇಶ್ವರ’ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ ಸೀಬಾರದ ಬಳಿ ‘ಮೈಲಾರಲಿಂಗೇಶ್ವರ’ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಕೃಪಾಪೋಷಿತ ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣಾರ್ಥ ‘ದನಗಳ’ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.ಮುರುಘಾಮಠದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರು ೧೯೫೫ನೇ ಸಾಲಿನಲ್ಲಿ ಮೈಲಾರಲಿಂಗೇಶ್ವರ ಮತ್ತು ಈಶ್ವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಜಾತ್ರಾ ಮಹೋತ್ಸವ ಪ್ರಾರಂಭಿಸಿದರು. ಜತೆಗೆ ರೈತರ ಅನುಕೂಲಕ್ಕಾಗಿ ದನಗಳ ಜಾತ್ರೆ ಮಾಡಬೇಕು ಎಂಬುದಾಗಿ ನಿರ್ಧರಿಸಿ, ಮಠದಿಂದ ಸುಮಾರು ೧೮ ಎಕರೆ ಜಾಗವನ್ನು ದನಗಳ ಜಾತ್ರೆ ನಡೆಸಲು ಬಳಸುವಂತೆ ಸೂಚಿಸಿ ಸುಮಾರು ೩೦೦೦ ನೆರಳಿನ ಮರಗಳನ್ನು ಬೆಳೆಸಿ ಪೋಷಿಸಿದ್ದರು.ಜಯದೇವ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ೫೯ ವರ್ಷಗಳಿಂದ ಪ್ರತಿವರ್ಷ ರಥೋತ್ಸವ ಮತ್ತು ದನಗಳ ಜಾತ್ರೆ ಆಚರಿಸಲಾಗುತ್ತಿದೆ.

ಅಂದಿನಿಂದ ಪ್ರತಿವರ್ಷ ನಡೆಯುವ ಈ ಜಾತ್ರೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ರಾಜ್ಯದ ವಿವಿಧೆಡೆಯಿಂದ ಹಳ್ಳಿಗಾರ, ಗುಜುಮಾವು, ಸಣ್ಣಮಲ್ಲಿಗೆ, ನಾಟಿ ಮುಂತಾದ ತಳಿಯ ಸಾವಿರಾರು ಜಾನುವಾರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ಇಲ್ಲಿ ಜಾನುವಾರು ಗಳಿಗೆ ಕುಡಿಯುವ ನೀರಿಗಾಗಿ ೨ ಕೊಳವೆ ಬಾವಿಗಳಿದ್ದು, ೧೫ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಪಶುವೆದ್ಯ ಆಸ್ಪತ್ರೆ ಸೌಕರ್ಯವಿದೆ.ಶಿವರಾತ್ರಿ ಪ್ರಯುಕ್ತ ಈ ಜಾತ್ರೆಯನ್ನು ಶಿವಮೂರ್ತಿ ಶರಣರು ನೆರವೇರಿಸುತ್ತಾ ಬಂದಿದ್ದು, ಸುಮಾರು ೧೫ ದಿನಗಳವರೆಗೆ ಜಾತ್ರೆ ನಡೆಯುತ್ತದೆ ಎಂದು ಗುತ್ತಿನಾಡು ಗ್ರಾಮದ ಜಾತ್ರಾ ಮಹೋತ್ಸವದ ವ್ಯವಸ್ಥಾಪಕ ಎಸ್.ಕೆ. ಮಲ್ಲಪ್ಪ ತಿಳಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಠದ ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಜಯದೇವಪ್ಪಗೌಡ, ಪ್ರಕಾಶ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.