ಸೋಮವಾರ, ಜನವರಿ 20, 2020
17 °C
ಕ್ರಿಕೆಟ್‌: ದೇವದತ್‌ ದ್ವಿಶತಕದ ಅಬ್ಬರ

ಸಂಯುಕ್ತ ನಗರ ವಲಯ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಯುಕ್ತ ನಗರ ಇಲೆವೆನ್‌ ತಂಡದ ದಾಳಿಯನ್ನು ಎದುರಿಸಿ ನಿಲ್ಲಲು ಪರದಾಡಿದ ರಾಯಚೂರು ಇಲೆವೆನ್‌ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ಆರಂಭವಾದ 14 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು.ಮೊದಲು ಬ್ಯಾಟ್‌ ಮಾಡಿದ ರಾಯಚೂರು ವಲಯ 56.2 ಓವರ್‌ಗಳಲ್ಲಿ 126 ರನ್‌ಗೆ ಸರ್ವಪತನ ಕಂಡಿತು. ಬ್ಯಾಟಿಂಗ್‌ ಆರಂಭಿಸಿರುವ ಸಂಯುಕ್ತ ನಗರ ಇಲೆವೆನ್‌ ಬುಧವಾರದ ಅಂತ್ಯಕ್ಕೆ 61 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 195 ರನ್‌ ಕಲೆ ಹಾಕಿ ಮೇಲುಗೈ ಸಾಧಿಸಿದೆ.ದ್ವಿಶತಕ: ಅಧ್ಯಕ್ಷರ ಇಲೆವೆನ್‌ ತಂಡದ ದೇವದತ್‌ (209) ದ್ವಿಶತಕ ಗಳಿಸಿ ಗಮನ ಸೆಳೆದರು. ಇದರಿಂದ ಈ ತಂಡ 75.5 ಓವರ್‌ಗಳಲ್ಲಿ 358 ರನ್‌ ಕಲೆ ಹಾಕಿತು.ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ: 56.2  ಓವರ್‌ಗಳಲ್ಲಿ 126. (ಜಯಪ್ರಕಾಶ್‌್ 27, ವಿದ್ಯಾಧರ 25; ಅನಿರುದ್ಧ್‌ ಗೋವಿಂದ್‌ 30ಕ್ಕೆ2).

ಸಂಯುಕ್ತ ನಗರ ಇಲೆವೆನ್‌: 61 ಓವರ್‌ಗಳಲ್ಲಿ 195ಕ್ಕೆ4. (ಜೆ. ಜೂಲಿಯನ್‌ ಬ್ಯಾಟಿಂಗ್ 76, ಆದರ್ಶ್‌ ಪ್ರಜ್ವಲ್‌ ಬ್ಯಾಟಿಂಗ್‌ 30; ಗಿರೀಶ್‌್ ಮಠಪತಿ 36ಕ್ಕೆ2). ಬೆಂಗಳೂರು ನಗರ ಇಲೆವೆನ್‌: 90 ಓವರ್‌ಗಳಲ್ಲಿ 471ಕ್ಕೆ7. (ಎ. ಅಮರನಾಥ್ 163, ಎಂ. ಮಿಥೇಶ್‌ 140). ಮಂಗಳೂರು ವಲಯ: 16  ಓವರ್‌ಗಳಲ್ಲಿ 36ಕ್ಕೆ2.ಮೈಸೂರು ವಲಯ: 68.3 ಓವರ್‌ಗಳಲ್ಲಿ 184. (ಹರ್ಷ 38, ಉತ್ತಮ ಗೌಡ 21, ಟಿ. ನಿರಂಜನ 21; ಅಖಿಲ್‌ ದೇವ್‌ ಅರಸ್‌ 50ಕ್ಕೆ3, ಚಂದನ್‌ ರಾಜ್‌ 30ಕ್ಕೆ2). ಉಪಾಧ್ಯಕ್ಷರ ಇಲೆವೆನ್‌ 43 ಓವರ್‌ಗಳಲ್ಲಿ 85ಕ್ಕೆ6. (ರೋಹನ್‌ ನಾಯಕರ್‌ ಬ್ಯಾಟಿಂಗ್‌ 46; ನಿರಂಜನ್‌ 38ಕ್ಕೆ4).ಅಧ್ಯಕ್ಷರ ಇಲೆವೆನ್‌ 75.5 ಓವರ್‌ಗಳಲ್ಲಿ 358. (ಬಿ.ಪಿ. ದೇವದತ್‌ 209, ಸಿ. ಭರತ್‌ 50, ಎಸ್‌. ಅಕ್ಷಯ್‌ 32; ಸುಪ್ರಿತ್‌ ಗೌಡ 76ಕ್ಕೆ2, ಬಿ.ಎ. ರಿಷಬ್‌ 76ಕ್ಕೆ2). ಶಿವಮೊಗ್ಗ ವಲಯ: 35 ಓವರ್‌ಗಳಲ್ಲಿ 3 ವಿಕೆಟ್‌ಗೆ 151. (ಎನ್‌.ಆರ್‌. ಆಕಾಶ್‌ ಶರ್ಮ ಬ್ಯಾಟಿಂಗ್‌ 77, ಪ್ರಜ್ವಲ್‌ ಗೌಡ 26).ತುಮಕೂರು ವಲಯ: 36.1 ಓವರ್‌ಗಳಲ್ಲಿ 96. (ನಿರ್ಮಿತ್‌ 30, ವಸ್ತಲ್‌ ಜೈನ್‌ 15ಕ್ಕೆ5).ಬೆಂಗಳೂರು ವಲಯ: 77 ಓವರ್‌ಗಳಲ್ಲಿ 276ಕ್ಕೆ8. (ಶಿವ ಕುಮಾರ್‌ 95, ಡೇನಿಯಲ್‌ 53, ರಾಹುಲ್‌ 44; ಸಂಜಯ್‌ 43ಕ್ಕೆ3). ಕಾರ್ಯದರ್ಶಿ ಇಲೆವೆನ್‌: 74.1 ಓವರ್‌ಗಳಲ್ಲಿ 358. (ಶಶಾಂಕ್‌ 85, ಪ್ರಜ್ವಲ್‌ 56; ಪುನಿತ್‌ 42ಕ್ಕೆ3). ಧಾರವಾಡ ವಲಯ: 38  ಓವರ್‌ಗಳಲ್ಲಿ 8 ವಿಕೆಟ್‌ಗೆ 106. (ಎಸ್‌. ಕುಲಕರ್ಣಿ 50).

ಪ್ರತಿಕ್ರಿಯಿಸಿ (+)