ಸಂವಾದಕ್ಕೆ ಆಹ್ವಾನ

7

ಸಂವಾದಕ್ಕೆ ಆಹ್ವಾನ

Published:
Updated:
ಸಂವಾದಕ್ಕೆ ಆಹ್ವಾನ

ಸಾಂಸ್ಕೃತಿಕ ವೈವಿಧ್ಯವೆಂದು ಗುರುತಿಸುವ ಕಲಾ ಪ್ರಕಾರಗಳು ಜಾತಿಗೆ ಸೀಮಿತವಾಗುವ ವ್ಯಂಗ್ಯವೊಂದು ನಮ್ಮ ಮುಂದಿರುವಂತೆಯೇ ಜಾತಿಯನ್ನು ಮೀರಿವೆ ಎಂಬ ಭಾವ ಹುಟ್ಟಿಸುವ ಕಲಾ ಪ್ರಕಾರಗಳೊಳಗೆ ಜಾತೀಯತೆ ಸುಪ್ತವಾಗಿರುವ ವಾಸ್ತವವೂ ನಮ್ಮೆದುರು ಇದೆ. ಈ ಹಿನ್ನೆಲೆಯಲ್ಲಿ ಭಿನ್ನ ಕಲಾ ಪ್ರಕಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚಿಸಿರುವ ಬರಹಗಳು ಇಲ್ಲಿವೆ. ತನ್ನ ಮೇರೆಗಳನ್ನು ವಿಶ್ವಾತ್ಮಕವಾಗಿ ವಿಸ್ತರಿಸಿಕೊಂಡಿರುವ ಚಿತ್ರ ಕಲಾ ಕ್ಷೇತ್ರದಲ್ಲಿರುವ ಸುಪ್ತ ಜಾತಿಕಾರಣವನ್ನು ಪ್ರಸಿದ್ಧ ಕಲಾವಿಮರ್ಶಕರೇ ಇಲ್ಲಿ ಅನಾವರಣಗೊಳಿಸಿದ್ದಾರೆ.ಯಕ್ಷಗಾನದ ಹಿರಿಯರಲ್ಲೊಬ್ಬರು ತಮ್ಮ ಅನುಭವವನ್ನು ಮುಂದಿಟ್ಟು ಜಾತಿಯನ್ನು ಮೀರುವ ಮಧ್ಯಮ ಮಾರ್ಗವೊಂದನ್ನು ಸೂಚಿಸಿದ್ದಾರೆ. `ಹೊರಗೆ ಉಳಿದುಕೊಳ್ಳುವ' ಪ್ರತಿಭಟನಾ ಮಾದರಿಯ ಮಿತಿಯನ್ನು ಮತ್ತೊಬ್ಬ ವಿದ್ವಾಂಸರು ತೆರೆದಿಟ್ಟಿದ್ದರೆ, `ಪ್ರಜಾವಾಣಿ' ಬಳಗದ ವರದಿಗಾರರೊಬ್ಬರು ವೀರಗಾಸೆ ಕಲೆಯ ದ್ವಂದ್ವವನ್ನು ಅನಾವರಣಗೊಳಿಸಿದ್ದಾರೆ.

ಈ ನಿಲುವುಗಳಿಗೆ ಭಿನ್ನವಾದ ಬಗೆಯಲ್ಲಿ ವಿಷಯವನ್ನು ಗ್ರಹಿಸಿರುವ ಓದುಗರೊಬ್ಬರ ಬರಹವೂ ಇದೆ. ಈ ಬರಹಗಳ ಮಿತಿಗಳೇನೇ ಇದ್ದರೂ ಚರ್ಚೆಯೊಂದಕ್ಕೆ ಬೇಕಿರುವ ಪ್ರಶ್ನೆಗಳನ್ನಂತೂ ಮುಂದಿಡುತ್ತಿವೆ. ನಿಮ್ಮ ಪ್ರತಿಕ್ರಿಯೆಗಳು ಈ ಚರ್ಚೆಯನ್ನು ಅರ್ಥ ಪೂರ್ಣಗೊಳಿಸುವುದರೊಂದಿಗೆ ಹೊಸ ವಿಚಾರಗಳನ್ನು ಬಯಲಿಗೆ ತರುತ್ತವೆ ಎಂಬುದು ನಮ್ಮ ನಿರೀಕ್ಷೆ.ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ 2013ರ ಜನವರಿ 26ರ ಒಳಗೆ ಕಳುಹಿಸಬಹುದು. ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001'

ಇಮೇಲ್:jathisamvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry