ಸಂವಾದಕ್ಕೆ ಆಹ್ವಾನ

7

ಸಂವಾದಕ್ಕೆ ಆಹ್ವಾನ

Published:
Updated:
ಸಂವಾದಕ್ಕೆ ಆಹ್ವಾನ

ಕಲೆಗೂ ಅಂಟಿಕೊಂಡಿರುವ ಜಾತೀಯತೆಯ ಕಲೆಯ ಕುರಿತಂತೆ ದೊಡ್ಡ ಸಂಖ್ಯೆ ಪ್ರತಿಕ್ರಿಯೆಗಳು ಬರುತ್ತಿವೆ. ಈ ಬಾರಿ ಸಂವಾದದ ಸಮನ್ವಯಕಾರರು ಜಾತಿ ಮೀಮಾಂಸೆಯ ಸೈದ್ಧಾಂತಿಕ ನೆಲೆಗಳ ಕುರಿತಂತೆ ಮಹತ್ವದ ವಿಚಾರಗಳನ್ನು ಮುಂದಿಟ್ಟಿದ್ದಾರೆ.

ಈ ವಿಚಾರದಲ್ಲೂ ತಮ್ಮಿಂದ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿರುವ ಅನೇಕರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಮುಂದಿನ ವಾರಗಳಲ್ಲಿ ನಿಮಗೆ ಜೊತೆಯಾಗಲಿದ್ದಾರೆ. ಹಾಗೆಯೇ ಜಾತಿಯ ಯಾವ ಆಯಾಮಗಳ ಕುರಿತು ಚರ್ಚೆ ನಡೆಯಬೇಕೆಂಬುದನ್ನು ನಮಗೆ ಬರೆದು ಕಳುಹಿಸಿ. ಅದರ ಜೊತೆಗೆ ಈ ತನಕ ಚರ್ಚೆಯಲ್ಲಿ ಪ್ರಸ್ತಾಪವಾದ ಎಲ್ಲಾ ಅಂಶಗಳಿಗೂ ತಾವು ಪ್ರತಿಕ್ರಿಯಿಸಬಹುದು. ಮುದ್ರಿತ ಆವೃತ್ತಿಯಲ್ಲಿ ಪ್ರಕಟವಾಗದ ಪ್ರತಿಕ್ರಿಯೆಗಳು `ಪ್ರಜಾವಾಣಿ'ಯ ಅಂತರಜಾಲ ತಾಣದಲ್ಲಿ ಪ್ರಕಟವಾಗುತ್ತವೆ.ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ 2013ರ ಫೆಬ್ರುವರಿ 15ರ ಒಳಗೆ ಕಳುಹಿಸಬಹುದು.

ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001'

ಇಮೇಲ್: jathisamvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry