ಶುಕ್ರವಾರ, ಜೂನ್ 18, 2021
24 °C

ಸಂಶಯಾಸ್ಪದ ಪೋಲಿಯೊ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಶಯಾಸ್ಪದ ಪೋಲಿಯೊ ಪ್ರಕರಣ ಪತ್ತೆ

ಹಿರೇಕೆರೂರ: ತಾಲ್ಲೂಕಿನ ಶಿರಗಂಬಿ ಗ್ರಾಮದಲ್ಲಿ ಸಂಶಯಾಸ್ಪದ ಪೋಲಿಯೊ ಪ್ರಕರಣ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೋಲಿಯೊ ನಿರ್ಮೂಲನೆಗೆ ಸಾಕಷ್ಟು ಕಾರ್ಯ ಕ್ರಮ ಹಮ್ಮಿಕೊಂಡಿದ್ದರೂ ಗ್ರಾಮದಲ್ಲಿ ಅರ್ಚಕ ರಾಗಿರುವ ಮಲಕಯ್ಯ ಅಂಡಿಗಿ ಎಂಬವರ ಪುತ್ರಿಯಾದ ನಾಲ್ಕೂವರೆ ವರ್ಷದ ಲತಾ ಸಂಶಯಾಸ್ಪದ ಪೋಲಿಯೊದಿಂದ ಬಳಲುತ್ತಿದ್ದಾಳೆ.ಸದಾ ಲವಲವಿಕೆಯಿಂದ ಆರೋಗ್ಯವಾಗಿದ್ದ ಲತಾಳಿಗೆ ಫೆ.19ರಂದು ಗ್ರಾಮದಲ್ಲಿ ಎಲ್ಲ ಮಕ್ಕಳಂತೆ ಪಲ್ಸ್ ಪೋಲಿಯೊ ಹನಿಯನ್ನು ಹಾಕಿಸಲಾಗಿದೆ. ನಾಲ್ಕು ದಿನಗಳ ನಂತರ ಎರಡೂ ಕಾಲುಗಳು ಓಡಾಡಲು ಬಾರದಂತಾದಾಗ ಪಾಲಕರು ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ.ಆರೋಗ್ಯ ಇಲಾಖೆಯ ಅಧಿಕಾರಿ ಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಬಾಲಕಿಯ ಬೇಧಿ ಯನ್ನು (ಮಲ) ಪರೀಕ್ಷೆಗಾಗಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಪರೀಕ್ಷಾ ಕೇಂದ್ರಕ್ಕೆ ಕಳಿಸ ಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ ಮಕ್ಕಳ ತಜ್ಞ ಡಾ.ಹೊನ್ನಪ್ಪ, `ಇದು ಸಂಶಯಾಸ್ಪದ ಪೋಲಿಯೊ ಪ್ರಕರಣ (ಅಕ್ಯೂಟ್ ಫ್ಲಾಸಿಡ್ ಪ್ಯಾರಾಲಿಸಿಸ್-ಎಎಫ್‌ಪಿ) ಆಗಿದೆ. ಇಂಥ ಪ್ರಕರಣಗಳು ಅಪರೂಪವಾಗಿದ್ದು, ಒಂದು ಲಕ್ಷ ಮಕ್ಕಳಲ್ಲಿ ಒಬ್ಬ ಮಗುವಿಗೆ ಕಾಣಿಸಿ ಕೊಳ್ಳುತ್ತದೆ. ಪ್ರಯೋಗಾಲಯ ವರದಿ ನಂತರ ಈ ಬಗ್ಗೆ ಖಚಿತಗೊಳ್ಳಲಿದೆ. ದಿನ  ಕಳೆದಂತೆ ಬಾಲಕಿಯ ಕಾಲುಗಳು ಸರಿಹೋಗುವ ಸಾಧ್ಯತೆ ಹೆಚ್ಚಿದೆ~ ಎಂದರು. ಬಡವ ಮಲಕಯ್ಯ ಅಂಡಿಗಿ ಮಗಳ ಈ ಸ್ಥಿತಿಯಿಂದ ದಿಕ್ಕು ತೋಚದಂತಾ ಗಿದ್ದಾರೆ. ಅವಳಿ ಮಕ್ಕಳ ಪೈಕಿ ಕಳೆದ ವರ್ಷ ಒಬ್ಬ ಮಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಳು.ಇಲಾಖೆಯ ನಿರ್ಲಕ್ಷ್ಯ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬಾಲಕಿಗೆ ಪೋಲಿಯೊಕಾಣಿಸಿ ಕೊಂಡಿದೆ. ರೋಗ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಪೋಲಿಯೊದಿಂದ ಬಳಲುತ್ತಿರುವ ಬಾಲಕಿಗೆ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು~ ಎಂದು ರಾಜ್ಯ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ. ಕೆಂಚಳ್ಳೇರ ಒತ್ತಾಯಿಸಿದ್ದಾರೆ. ಬುಧವಾರ ಶಂಕಿತ ಪೋಲಿಯೊ ಪೀಡಿತ ಬಾಲಕಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿದರು.ರೈತ ಮುಖಂಡರಾದ ಸಿದ್ದೇಶ ಮಜ್ಜಗಿ, ಸತೀಶ ಬಣಕಾರ, ಶಂಕ್ರಗೌಡ ಮಕ್ಕಳ್ಳಿ, ಭೀಮನಗೌಡ ಪಾಟೀಲ, ಸಣ್ಣಗೌಡ ಪಾಟೀಲ ಹಾಜರಿದ್ದರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.