ಸೋಮವಾರ, ಏಪ್ರಿಲ್ 19, 2021
31 °C

ಸಂಶೋಧನೆಗೆ ಇತಿಹಾಸದ ಅರಿವಿನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ : ಸಂಶೋಧನಾ ವಿದ್ಯಾರ್ಥಿಗಳಿಗೆ ಇತಿಹಾಸ ಅಧ್ಯಯನ ಕೊರತೆ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ   ಯಾವುದೇ ವಿದ್ಯಾರ್ಥಿ ಸಂಶೋಧನೆಯನ್ನು ಕೈಗೊಳ್ಳುವಾಗ ಸಂಶೋಧನೆಗೆ ಸಂಬಂಧಿಸಿದ ವಿಷಯದ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದಿರಬೇಕು ಎಂದು ಬಬಲೇಶ್ವರದ ಶಾಂತವೀರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಎಸ್.ಐ. ಬಿರಾದಾರ ಹೇಳಿದರು.ಕೂಡಲಸಂಗಮದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಹಾಗೂ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ವಚನ ಸಂವಾದ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಗೊಲ್ಲಾಳೇಶ್ವರ ಬಸವಣ್ಣನಿಗಿಂತಲೂ ಪೂರ್ವದಲ್ಲಿಯ ವಚನಕಾರ ಇವರ 10 ವಚನಗಳು ದೊರಕಿರುವವು ಆದರಿಂದ ಇಂತಹ ವಚನಕಾರರ ಪರಿಚಯ ನಮ್ಮ ಯುವಜನಾಂಗಕ್ಕೆ ಇಲ್ಲ ಆದರಿಂದ ಇಂದಿನ ಯುವ ಜನಾಂಗಕ್ಕೆ ವಚನಕಾರರ ಇತಿಹಾಸ ತಿಳಿಸುವಂತಹ ಯೋಜನೆಯನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೂಡಲ ಸಂಗಮ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಎಫ್.ಟಿ.ಹಳ್ಳಿಕೇರಿ ವಹಿಸಿ ಮಾತನಾಡಿ, ಹಂಪಿ ವಿಶ್ವವಿದ್ಯಾಲಯವು ಕನ್ನಡದ ಜ್ಞಾನಶಾಖೆಗಳ ವಿಸ್ತರಣೆಗೆ ಹಲವಾರು ಕೇಂದ್ರಗಳನ್ನು ರಾಜ್ಯದ ವಿವಿದ ಭಾಗದಲ್ಲಿ ಆರಂಭಿಸಿದ್ದು ಅವುಗಳ ಪ್ರಯೋಜನವನ್ನು ಆಯಾಭಾಗದ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಯಲ್ಲಪ್ಪ ಸವದತ್ತಿ, ಕೂಡಲಸಂಗಮ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ, ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ಸಂಗಮೇಶ್ವರ ಪದವಿ ಪೂರ್ವ ಕಾಲೇಜನ ಕನ್ನಡ ಉಪನ್ಯಾಸಕ ನಾಗರಾಜ ನಾಡಗೌಡ ಮುಂತಾದವರು ಉಪಸ್ಥಿತರಿದ್ದರು. ಮಹೇಶ ತಿಪ್ಪಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು, ನಾಗರಾಜ ನಾಡಗೌಡ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.