ಸಂಶೋಧನೆಯಲ್ಲಿ ಗುಣಮಟ್ಟ ಅಗತ್ಯ

ಸೋಮವಾರ, ಮೇ 27, 2019
24 °C

ಸಂಶೋಧನೆಯಲ್ಲಿ ಗುಣಮಟ್ಟ ಅಗತ್ಯ

Published:
Updated:

ಅಮರಾಪುರಂ ಮಂಡಲ್ (ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ): ಸಂಶೋಧಕರು ಸಂಶೋಧನೆಯಲ್ಲಿ ಗುಣಮಟ್ಟ ಕಾಪಾಡಬೇಕು. ಹೊಸದಾಗಿ ಈ ಕ್ಷೇತ್ರಕ್ಕೆ ಬರುವ ಯುವ ಸಂಶೋಧಕರಿಗೆ ಕಮ್ಮಟಗಳು ಬಹಳ ಉಪಯುಕ್ತ ಎಂದು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಹೇಮಾಕ್ಷಿ ಆಚಾರ್ ಹೇಳಿದರು.ಕನ್ನಡ ಸಾಹಿತ್ಯಪರಿಷತ್ತಿನ ಆಂಧ್ರ ಗಡಿನಾಡ ಘಟಕವು ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ `ಕನ್ನಡ ಸಂಶೋಧನಾ ಕಮ್ಮಟ: ವಿಧಿ -ವಿಧಾನಗಳು ಮತ್ತು ಇತ್ತೀಚಿನ ಸಂಶೋಧನೆಗಳು~ ಎಂಬ ಎರಡು ದಿನಗಳ ಕಮ್ಮಟವನ್ನು ಉದ್ಘಾಟಿಸಿ ತಿಳಿಸಿದರು.ಮುಖ್ಯಅತಿಥಿ ದ್ರಾವಿಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಪ್ರೊ. ರಾಜೇಂದ್ರ ಪ್ರಸಾದ್ ಮಾತನಾಡಿ, `ಆಧುನಿಕ ಸಮಾಜದಲ್ಲಿ ಸಂಶೋಧನೆ ಎನ್ನುವುದು ಹೊಸ ಹೊಸ ಆಯಾಮಗಳನ್ನು ಪಡೆಯುತ್ತವೆ. ತೆಲುಗು ಮತ್ತು ಕನ್ನಡ ಭಾಷಾ ಪಠ್ಯಗಳು ಹಾಗೂ ಸಂಸ್ಕೃತಿಯ ತೌಲನಿಕ ಅಧ್ಯಯನ ಕುರಿತು ಸಂಶೋಧನೆ ಮಾಡುವ ಅಗತ್ಯವಿದೆ~ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಂಧ್ರಪ್ರದೇಶ ಗಡಿನಾಡು ಘಟಕದ ಅಧ್ಯಕ್ಷ ಎಚ್. ರಾಮಚಂದ್ರಪ್ಪ ವಹಿಸಿದ್ದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕೆ. ಶಾರದಾ, ಶಿಬಿರದ ನಿರ್ದೇಶಕರಾದ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry