ಸೋಮವಾರ, ಮೇ 17, 2021
22 °C

ಸಂಶೋ ಧನಾ ಕೇಂದ್ರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಹೈದರಾಬಾದ ಕರ್ನಾಟಕ ಪ್ರದೇಶದ ಈ ಭಾಗದಲ್ಲಿ ರೈತರ ಸಂಶೋಧನಾ ಕೇಂದ್ರವೊಂದು ಸ್ಥಾಪಿಸುವುದು ಅಗತ್ಯವಾಗಿದೆ ಎಂದು ರಾಜೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ವನಮಾರಪಳ್ಳಿಯಲ್ಲಿ ಭಾನುವಾರ ನಡೆದ ಸಾವಯವ ಕೃಷಿಕರ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಾರಾಷ್ಟ್ರದ ಔರಂಗಾಬಾದನಲ್ಲಿ ಐದು ಎಕರೆ ಜಮೀನಿನಲ್ಲಿ ರೈತ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ರೈತರೇ ಎಲ್ಲವನ್ನು ನೋಡಿಕೊಂಡು ಪ್ರತಿ ವರ್ಷ 1 ಕೋಟಿಗೂ ಜಾಸ್ತಿ ಮೊತ್ತದ ಇಳುವರಿ ತೆಗೆಯುತ್ತಾರೆ ಎಂದು ಹೇಳಿದರು. ಇದೇ ಮಾದರಿ ಕೆಲಸ ನಮ್ಮಲ್ಲಿಯೂ ಅಗಬೇಕು ಎಂದರು.ರೈತರು ಸ್ವಲ್ಪ ಎಚ್ಚರಿಕೆ ವಹಿಸಿದರೆ ಅದ್ಭುತ ಸಾಧನೆ ಮಾಡಬಹುದು. ಕೆಲ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಎಕರೆಗೆ 15ರಿಂದ 20 ಕ್ವಿಂಟಲ್ ಇಳುವರಿ ತೆಗೆಯಬಹುದಾಗಿದೆ. ಜನರಲ್ಲಿ ಶ್ರಮ ಸಂಸ್ಕೃತಿ ಮಾಯವಾಗುತ್ತಿರುವುದರಿಂದ ಕೃಷಿ ವಲಯ ಹಿನ್ನಡೆ ಅನುಭವಿಸಬೇಕಾಗಿದೆ. ರೈತರು ತಮ್ಮ ಮಕ್ಕಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಸರ್ಕಾರ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ರೈತರಿಗೆ ಕನಿಷ್ಠ ಎಂಟು ಗಂಟೆ ನಿರಂತರ ವಿದ್ಯುತ್ ಕೊಡಬೇಕು. ಈ ನಿಟ್ಟಿನಲ್ಲಿ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.ಪ್ರಗತಿಪರ ರೈತ ವೀರಭೂಷಣ ಸಾವಯವ ಕೃಷಿ ಕುರಿತು ಕೆಲ ಪ್ರಾತ್ಯೆಕ್ಷಿಕೆ ಮಾಡಿ ತೋರಿಸಿದರು. ಮಿಶ್ರ ಬೆಳೆಯಿಂದ ರೈತರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಹೇಳಿದರು.ಸಾವಯವ ಕೃಷಿ ಪರಿವಾರದ ತಾಲ್ಲೂಕು ಅಧ್ಯಕ್ಷ ಸತ್ಯವಾನ ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ಐದು ಸಾವಿರ ಸಾವಯವ ಕೃಷಿ ಪರಿವಾರದ ಸದಸ್ಯರಿದ್ದಾರೆ. ಇನ್ನು ಹೆಚ್ಚು ರೈತರು ಸದಸ್ಯರಾಗಬೇಕು ಎಂದು ತಿಳಿಸಿದರು. ವ್ಯಾಪಾರಿ ರವೀಂದ್ರ ಮೀಸೆ, ಎಪಿಎಂಸಿ ಸದಸ್ಯ ಗೋವಿಂದ ಇಂಗಳೆ, ಶ್ರೀಮಂತ ಬಿರಾದಾರ್, ನಿವೃತ್ತ ಶಿಕ್ಷಕ ಶಾಂತಲಿಂಗ, ಬಾಬುರಾವ ವನಮಾರಪಳ್ಳಿ ಇತರ ರೈತರು ಪಾಲ್ಗೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.