ಮಂಗಳವಾರ, ಮೇ 11, 2021
25 °C

ಸಂಸತ್ತಿನಲ್ಲಿ ಬೊಫೋರ್ಸ್ ಲಂಚ ಪ್ರಸ್ತಾಪಕ್ಕೆ ಬಿಜೆಪಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಟಲಿಯ ವಾಣಿಜ್ಯೋದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ರಕ್ಷಿಸುವ ಸಲುವಾಗಿ ತನಿಖೆ ವಿಚಾರದಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಅವರು ಮೃದುಹಾದಿ ತುಳಿದರು ಎಂಬ ಹೊಸ ಆರೋಪಗಳ ಹಿನ್ನೆಲೆಯಲ್ಲಿ ಭೊಪೋರ್ಸ್ ಲಂಚ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಿಜೆಪಿ ಸಂಸದೀಯ ಪಕ್ಷವು ಬುಧವಾರ ನಿರ್ಧರಿಸಿತು.ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಆರೋಪಗಳ ವಿಚಾರವನ್ನು ಪಸ್ತಾಪಿಸಿ ಮಾಜಿ ಸ್ವೀಡಿಷ್ ಪೊಲೀಸ್ ಮುಖ್ಯಸ್ಥ ಸ್ಟೆನ್ ಲಿಂಡ್ ಸ್ಟೋರ್ಮ್ ಅವರು ಸಂದರ್ಶನವೊಂದರಲ್ಲಿ ಬೊಫೋರ್ಸ್ ಹಗರಣ ಕುರಿತ ಆರೋಪಗಳ ಬಗ್ಗೆ ಮಾತನಾಡಿರುವ ಬಗ್ಗೆ ಪ್ರಸ್ತಾಪಿಸಿದರು.~ಆ ಸಮಯದಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಇಡೀ ಭಾರತ ಸರ್ಕಾರವೇ ಇಟಲಿಯ ವಾಣಿಜ್ಯೋದ್ಯಮಿ ಒಟ್ಟಾವಿಯೋ ಕ್ವಟ್ರೋಚಿ  ರಕ್ಷಣೆಗೆ ಕಟಿಬದ್ಧವಾಗಿತ್ತು~ ಎಂದು ಬಿಜೆಪಿ ವಕ್ತಾರ  ರವಿ ಶಂಕರ ಪ್ರಸಾದ್ ಇಲ್ಲಿ ವರದಿಗಾರರ ಜೊತೆ ನಂತರ ಮಾತನಾಡುತ್ತಾ ಹೇಳಿದರು.ಬಿಜೆಪಿಯು ವಿಷಯವನ್ನು ಮೇ 2ರಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವಾಲಯದ ಕಾರ್ಯ ವೈಖರಿ ವಿಚಾರ ಚರ್ಚೆಗೆ ಬಂದಾಗ ಪ್ರಸ್ತಾಪಿಸುವುದು. ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವ ಬಗೆಗೆಗೂ ಪಕ್ಷ ಯೋಜಿಸಿದೆ. ಆದರೆ ಯಾವ ರೀತಿ, ಹೇಗೆ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜೇಟ್ಲಿ ಹೇಳಿದರು.ಕ್ವಟ್ರೋಚಿ ರಕ್ಷಣೆಯಲ್ಲಿ ಸ್ವತಃ ರಾಜೀವ್ ಗಾಂಧಿಯವರು ಪಾಲುದಾರರಾಗಿದ್ದರೇ ಎಂಬ ಪ್ರಶ್ನೆಗೆ ~ಅವರ ಸರ್ಕಾರ ಕ್ವಟ್ರೋಚಿ ರಕ್ಷಣೆಗೆ ಹಾಗೂ ತನಿಖೆ ಹತ್ತಿಕ್ಕಲು ಪ್ರಯತ್ನಿಸಿತ್ತು. ರಾಜೀವ್ ಗಾಂಧಿ ಅವರ ಸರ್ಕಾರ ತನಿಖೆ ಸ್ಥಗಿತಗೊಳಿಸಲು ಮತ್ತು ತನಿಖಾ ಕಲಾಪಗಳನ್ನು ವಿಳಂಬಗೊಳಿಸಲು ಮತ್ತು ಕ್ವಟ್ರೋಚಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ತಡೆಯಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು ಎಂಬುದು ಸಂದರ್ಶನದಿಂದ ಸ್ಪಷ್ಟವಾಗುತ್ತದೆ~ ಎಂದು ಪ್ರಸಾದ್ ನುಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.