ಸಂಸತ್ತಿನಲ್ಲಿ ಶ್ರದ್ಧಾಂಜಲಿ

7

ಸಂಸತ್ತಿನಲ್ಲಿ ಶ್ರದ್ಧಾಂಜಲಿ

Published:
Updated:

ನವದೆಹಲಿ (ಪಿಟಿಐ): ಇತ್ತೀಚೆಗೆ ನಿಧನರಾದ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ಭೀಮಸೇನ್ ಜೋಷಿ, ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಮತ್ತು ಶಬರಿಮಲೆ ಯಾತ್ರೆಯಿಂದ ಮರಳುವಾಗ ಕಾಲ್ತುಳಿತಕ್ಕೆ ಸಿಕ್ಕಿ ಸತ್ತ ನೂರಾರು ಮಂದಿಯ ಆತ್ಮಕ್ಕೆ ಶಾಂತಿ ಕೋರಿ ಲೋಕಸಭೆಯಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು. ರಾಷ್ಟ್ರಪತಿ ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಸಭೆ ಸೇರಿದಾಗ ಲೋಕಸಭಾಧ್ಯಕ್ಷೆ ಮೀರಾ ಕುಮಾರ್, ಅಗಲಿದ ಲೋಕಸಭೆಯ ಮಾಜಿ ಅಧ್ಯಕ್ಷ ಬಲಿರಾಂ ಭಗತ್, ಮಾಜಿ ಸಂಸದರಾದ ಲಟ್‌ಪಟ್ ಅಲಿ ಖಾನ್, ಪ್ರಭಾವತಿ ಗುಪ್ತ, ಟಿ. ಎಸ್. ಶೃಂಗಾರೆ, ಕರುಣಾಕರನ್, ಭೀಮಸೇನ್ ಜೋಷಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಗೊತ್ತುವಳಿ ಮಂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry