ಭಾನುವಾರ, ಮಾರ್ಚ್ 7, 2021
27 °C

ಸಂಸತ್‌ ಕಲಾಪದ ಅವಧಿ ವಿಸ್ತರಣೆ ಇಲ್ಲ: ಕಮಲ್‌ನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್‌ ಕಲಾಪದ ಅವಧಿ ವಿಸ್ತರಣೆ ಇಲ್ಲ: ಕಮಲ್‌ನಾಥ್‌

ನವದೆಹಲಿ (ಪಿಟಿಐ): ಸಂಸತ್‌ ಕಲಾಪದ ಅವಧಿಯನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್‌ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. 

ಆರು ಪ್ರಮುಖ ವಿಧೇಯಕಗಳು ಮಂಡನೆಯಾಗಬೇಕಿರುವುದರಿಂದ ಕಲಾಪದ ಅವಧಿಯನ್ನು ವಿಸ್ತರಿಸುವ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಳಿವು ನೀಡಿದ್ದರು.ಈ ಬಗ್ಗೆ ಮಾಧ್ಯಮಗಳು ಸಚಿವರನ್ನು ಪ್ರಶ್ನಿಸಿದಾಗ ಬಾಕಿ ಉಳಿದಿರುವ ವಸೂದೆಗಳ ಮಂಡನೆಗೆ ಕಾಲಾವಕಾಶ ಬೇಕು ಆಗಾಗಿ ಸದನದ ಅವಧಿ ವಿಸ್ತರಿಸುವ ಉದ್ದೇಶ ಸರ್ಕಾರಕ್ಕಿದೆ  ಆದರೆ ವಿರೋಧ ಪಕ್ಷಗಳು ಇದಕ್ಕೆ ಒಪ್ಪುತ್ತಿಲ್ಲವಾದ್ದರಿಂದ ಕಲಾಪ ಮುಂದುವರೆಸಲು ಸಾಧ್ಯವಿಲ್ಲ ಎಂದು ಕಮಲ್ ನಾಥ್‌ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.