ಭಾನುವಾರ, ನವೆಂಬರ್ 17, 2019
23 °C

ಸಂಸತ್ ಚುನಾವಣೆಗೆ ಮುಷರಪ್ ಅನರ್ಹ

Published:
Updated:
ಸಂಸತ್ ಚುನಾವಣೆಗೆ ಮುಷರಪ್ ಅನರ್ಹ

ಇಸ್ಲಾಮಾಬಾದ್ (ಐಎಎನ್‌ಎಸ್): 2007ರಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿದ್ದಾಗ ಸಂವಿಧಾನವನ್ನು ಬದಿಗೊತ್ತಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಪ್ ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯವು ಅವರನ್ನು ಮಂಗಳವಾರ ಅನರ್ಹಗೊಳಿಸಿದೆ.ಸಂಸತ್ ಚುನಾವಣೆಯಲ್ಲಿ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ನಾಲ್ಕು ಕ್ಷೇತ್ರಗಳಿಂದ ಮುಷರಪ್ ಸ್ಪರ್ಧಿಸಲು ಬಯಸಿದ್ದರು. ಆದರೆ ಪಾಕ್ ಚುನಾವಣಾ ಆಯೋಗ ಅವರ ಮೂರು ನಾಮಪತ್ರಗಳನ್ನು ತಿರಸ್ಕರಿಸಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.ಕರಾಚಿಯ ಸಿಂಧ್, ಪಂಜಾಬ್ ಪ್ರಾಂತ್ಯದಲ್ಲಿನ ಕಸುರ್ ಹಾಗೂ ಇಸ್ಲಾಮಾಬಾದ್ ಕ್ಷೇತ್ರಗಳಿಗೆ ಸಲ್ಲಿಸಿದ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಷರಪ್ ಹೈಕೋರ್ಟ್‌ನ ಚುನಾವಣಾ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ನ್ಯಾಯಾಧೀಶರು ತಳ್ಳಿಹಾಕಿದರು.ಈ ನಡುವೆ ಖೈಬರ್ ಪಕ್ತುಂಕ್ವಾ ಪ್ರಾಂತ್ಯದ ಉತ್ತರ ಉತ್ತರ ಚಿತ್ರಾಲ್ ಜಿಲ್ಲೆಯಲ್ಲಿ ಮಾತ್ರ ಮುಷರಪ್ ಅವರ ನಾಮಪತ್ರವನ್ನು ಸ್ವೀಕರಿಸಲಾಗಿದ್ದು, ಆದರೆ ಈ ಕ್ರಮ ಅವರ ರಾಜಕೀಯ ಎದುರಾಳಿಗಳನ್ನು ಕೆರಳಿಸಿದ್ದು ಈ ಕುರಿತು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)