ಗುರುವಾರ , ನವೆಂಬರ್ 21, 2019
26 °C

ಸಂಸದ ಅಂಬಿಕ ಬ್ಯಾನರ್ಜಿ ನಿಧನ

Published:
Updated:
ಸಂಸದ ಅಂಬಿಕ ಬ್ಯಾನರ್ಜಿ ನಿಧನ

ಕೋಲ್ಕತ್ತ/ನವದೆಹಲಿ (ಐಎಎನ್‌ಎಸ್): ತೃಣಮೂಲ ಕಾಂಗ್ರೆಸ್ ಸಂಸದ ಅಂಬಿಕ ಬ್ಯಾನರ್ಜಿ (84) ಗುರುವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅನಾರೋಗ್ಯದಿಂದಾಗಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬ್ಯಾನರ್ಜಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವೃತ್ತಿಯಿಂದ ಮೆಕಾನಿಕಲ್ ಎಂಜನಿಯರ್ ಆಗಿದ್ದ ಅವರು, ಹೌರಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ವಿಧಾನಸಭೆಗೆ 1982ರಿಂದ ಐದು ಬಾರಿ ಆಯ್ಕೆಯಾಗಿದ್ದರು. ಮೊದಲು ಕಾಂಗ್ರೆಸ್‌ನಿಂದ ನಂತರ ತೃಣಮೂಲ ಕಾಂಗ್ರೆಸ್‌ನಿಂದ ಗೆದ್ದಿದ್ದರು.ಗುರುವಾರ ಬೆಳಿಗ್ಗೆ ಲೋಕಸಭೆಯಲ್ಲಿ ಅಗಲಿದ ಸದಸ್ಯನಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತು ಅಂತಿಮ ವರದಿ ಸಿದ್ಧಪಡಿಸಲು ನಡೆಯಬೇಕಿದ್ದ ಜಂಟಿ ಸಂಸದೀಯ ಸಮಿತಿ ಸಭೆಯನ್ನೂ ಮುಂದಿನ ವಾರಕ್ಕೆ ಮುಂದೂಡಲಾಯಿತು.

ಪ್ರತಿಕ್ರಿಯಿಸಿ (+)