`ಸಂಸ್ಕಾರಕ್ಕೆ ದೇವಳಗಳು ಆದ್ಯತೆ ನೀಡಲಿ'

7

`ಸಂಸ್ಕಾರಕ್ಕೆ ದೇವಳಗಳು ಆದ್ಯತೆ ನೀಡಲಿ'

Published:
Updated:

ಶಿಮಂತೂರು (ಮೂಲ್ಕಿ):  ಭಾರತೀಯ ಸಂಗೀತದಲ್ಲಿ ಸಂಸ್ಕಾರದ ಸಂಪೂರ್ಣ ಜ್ಞಾನವಿದೆ. ಸಂಗೀತದ ಮನಸ್ಸಿಗೆ ಶಾಂತಿ ನೆಮ್ಮದಿ ಒದಗಿಸುತ್ತಿತ್ತು. ಇಂದು ನಾವು  ಭಾರತೀಯ ಸಂಗೀತದ ಶ್ರೀಮಂತ ಪರಂಪರೆ ಮರೆಯುತ್ತಿದ್ದೇವೆ. ದೇವಸ್ಥಾನಗಳು ಸಂಸ್ಕಾರ, ಸಂಸ್ಕೃತಿಯ ಜ್ಞಾನವನ್ನು ಪಸರಿಸುವ ಕೇಂದ್ರಗಳಾಗಬೇಕು' ಎಂದು ಕಸಾಪದ ಮಾಜಿ ರಾಜ್ಯಾಧ್ಯ ಹರಿಕೃಷ್ಣ ಪುನರೂರು ಹೇಳಿದರು.ಮೂಲ್ಕಿಯ ಶಿಮಂತೂರು ಶ್ರಿಆದಿ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಸಂಯೋಜಿಸಿರುವ 43 ದಿನಗಳ ಭಾರತೀಯ ಸಂಗೀತದ ಪರಿಕಲ್ಪನೆಯನ್ನು ಒಳಗೊಂಡ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಬಿರವನ್ನು ಪದ್ಮಾವತಿ ಹರಿಪೂಂಜ ಕಾರ್ನಾಡು ಉದ್ಘಾಟಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಹಾಯಕ ಆಯುಕ್ತ ಎಂ.ಸರ್ವೋತ್ತಮ ಅಂಚನ್, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಾಮಚಂದ್ರ ಭಟ್, ನರಸಿಂಹ ಭಾಗವತ್ ಮೂಲ್ಕಿ, ದೇವಸ್ಥಾನದ ಅರ್ಚಕರಾದ ಪುರುಷೋತ್ತಮ ಭಟ್, ಮೋಹನ್ ಸುವರ್ಣ, ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.ಬಪ್ಪನಾಡು ಶ್ರಿದುರ್ಗಾಪರಮೇಶ್ವರಿ ಯುವಕ ವೃಂದ ಭಜನಾ ಮಂಡಳಿಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಶಿಬಿರದಲ್ಲಿ ನಿರಂತರ 43 ದಿನಗಳ ಕಾಲ ಭಾರತೀಯ ಸಂಗೀತದ ಕಲೆಗಳಾದ ಭಜನೆ, ತಬಲಾ, ಹಾರ್ಮೋನಿಯಂ, ಚಂಡೆವಾದನ ತರಬೇತಿ, ಯೋಗ, ಧ್ಯಾನ, ನಿತ್ಯ ಸ್ತೋತ್ರ, ಜೀವನ ಕೌಶಲ್ಯ, ಚಿತ್ರಕಲೆ, ಭಾಷಣ ಕಲೆ ಮುಂತಾದ ವೈವಿಧ್ಯಮಯ ತರಬೇತಿ ಕಾರ್ಯಕ್ರಮವು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry