ಸಂಸ್ಕೃತಿ ಉಳಿವಿಗೆ ದಸರಾ ಸಹಕಾರಿ

7

ಸಂಸ್ಕೃತಿ ಉಳಿವಿಗೆ ದಸರಾ ಸಹಕಾರಿ

Published:
Updated:

ಗೋಣಿಕೊಪ್ಪಲು: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಉತ್ಸವ ಜನತೆಗೆ ಮನರಂಜನೆ ಮತ್ತು ಚಾಮುಂಡಿದೇವಿಯ ಆರಾಧನೆ ಮಾಡುತ್ತಿದ್ದರು ಎಂದು ಆರ್‌ಎಂಸಿ ಮಾಜಿ ಅಧ್ಯಕ್ಷ ಬೋಸ್ ದೇವಯ್ಯ ಹೇಳಿದರು.ಗೋಣಿಕೊಪ್ಪಲು ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದುಷ್ಟಶಕ್ತಿಯ ನಿಗ್ರಹ, ಶಿಷ್ಟರ ರಕ್ಷಣೆ ದಸರಾ ಉತ್ಸವದಲ್ಲಿ ಅಡಗಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ದಸರಾ ಉತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು. ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯೆ ಅನಿತಾ ಕಂಜಿತಂಡ ಮಾತನಾಡಿ, ಸಂಸ್ಕೃತಿ ಉಳಿವಿಗೆ ದಸರಾ ಉತ್ಸವ ಸಹಕಾರಿ ಎಂದರು. ಹಿರಿಯ ವೈದ್ಯ ಕೆ.ಕೆ.ಶಿವಪ್ಪ, ಹಿರಿಯರ ದೂರದೃಷ್ಟಿ ಫಲವಾಗಿ ಇಂದು ಗೋಣಿಕೊಪ್ಪಲು ದಸರಾ ಜೃಂಭಣೆಯಿಂದ ಜರುಗುತ್ತಿದೆ.

ಇಂತಹ ಉತ್ಸವಗಳ ಮೂಲಕ ಸಂಸ್ಕೃತಿ ಉಳಿಯುತ್ತಿದೆ. ಇದನ್ನು ಮುಂದೆಯೂ ನಡೆಸಿಕೊಂಡು ಬರಬೇಕು ಎಂದು ಸಲಹೆ ನೀಡಿದರು. ಚಿನ್ನಬೆಳ್ಳಿ ವರ್ತಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಜಿ.ಮೋಹನ್,ಗ್ರಾಮ ಪಂಚಾಯಿತಿ ಸದಸ್ಯೆ ರಮಾವತಿ, ವೃತ್ತ ನಿರೀಕ್ಷಕ  ಶೈಲೇಂದ್ರ ಹಾಜರಿದ್ದರು.   ಕುಪ್ಪಂಡ ತಿಮ್ಮಯ್ಯ ಸ್ವಾಗತಿಸಿದರು. ನಾರಾಯಣಸ್ವಾಮಿ ನಾಯ್ಡು ವಂದಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry