`ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ'

7

`ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ'

Published:
Updated:

 


ಕಂಪ್ಲಿ: ಭಾರತದ ಅಮೂಲ್ಯ ಸಂಸ್ಕೃತಿ, ಪರಂಪರೆಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಎಮ್ಮಿಗನೂರು ವಾಮ ದೇವ ಮಹಾಂತ ಶಿವಾಚಾರ್ಯರು ತಿಳಿಸಿದರು.

 

ಸ್ಥಳೀಯ ಪೇಟೆ ಬಸವೇಶ್ವರ ದೇವಸ್ಥಾನ ಮಹಾದ್ವಾರ ಮತ್ತು ನೂತನ ತೇರಿನ ಮನೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಸಾರ್ಥಕ ಜೀವನಕ್ಕೆ ಧರ್ಮ ಆಚರಣೆಗಳನ್ನು ತಪ್ಪದೆ ಪಾಲಿಸುವಂತೆ ಸದ್ಭಕ್ತರಿಗೆ ಸಲಹೆ ನೀಡಿದರು.

 

ಕಲ್ಮಠ ಅಭಿನವ ಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾರಾಷ್ಟ್ರ ರಾಚೋಟೇಶ್ವರ ಸ್ವಾಮೀಜಿ ಹಾಜರಿದ್ದರು.

ನೀಲಮ್ಮದೇವಿ, ಬಸವೇಶ್ವರರ ಶುಭ ವಿವಾಹ: ಪೇಟೆ ಬಸವೇಶ್ವರ ಮತ್ತು ನೀಲಮ್ಮದೇವಿಯವರ ಜೋಡಿ ರಥೋತ್ಸವ ಇದೇ 22ರಂದು ಜರುಗಲಿದ್ದು, ಇದರ ಅಂಗವಾಗಿ ದೇವಸ್ಥಾನದಲ್ಲಿ ಗುರುವಾರ ನೀಲಮ್ಮದೇವಿ ಮತ್ತು ಪೇಟೆ ಬಸವೇಶ್ವರರ ಶುಭ ವಿವಾಹ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು.

 

ಶುಭ ವಿವಾಹದಲ್ಲಿ ಬಸವೇಶ್ವರ(ವರ) ಪರವಾಗಿ ಕೆ. ಬಸವರಾಜ ಮತ್ತು ಕುಟುಂಬದವರು ಹಾಗೂ   ನೀಲಮ್ಮದೇವಿ(ಕನ್ಯೆ) ಪರವಾಗಿ ಮುಖೇಶ್ ಕುಟುಂಬದವರು ವಿಹಾಹ ಸೇವೆ ಸಲ್ಲಿಸಿದರು. ಕಳಸ ಕನ್ನಡಿ ಹಿಡಿದ ನೂರಾರು ಸುಮಂಗಲೆಯರು ಹಾಜರಿದ್ದರು.

 

ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಮಂಡಳಿ ಧರ್ಮಕರ್ತ ಪಿ.ಎ. ಬೆನಕನಾಳಮಠ, ಅಧ್ಯಕ್ಷ ಡಿ. ವೀರಪ್ಪ, ಕಾರ್ಯದರ್ಶಿ ಕಪ್ಪರದ ಕಾಶಿನಾಥಸ್ವಾಮಿ, ಸಹ ಕಾರ್ಯದರ್ಶಿ ಯು.ಎಂ. ವಿದ್ಯಾಶಂಕರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಭತ್ತದ ಮಂಜುನಾಥ, ಪುಟ್ಟಿ ಬಸವನಗೌಡ, ಬಂಡಯ್ಯಸ್ವಾಮಿ, ವಾಲಿ ವಿದ್ಯಾಧರ, ಸಿ.ಕೆ. ಶಿವಮೂರ್ತಿಸ್ವಾಮಿ, ಬಡಿಗೇರ ವೀರೇಶಪ್ಪ, ಅಲಬನೂರು ರವೀಂದ್ರ, ಮಣ್ಣೂರು ಶರಣಪ್ಪ, ಮುಕ್ಕುಂದಿ ಬಸವರಾಜಸ್ವಾಮಿ, ಬಣಗಾರ ಚಂದ್ರಶೇಖರಪ್ಪ, ಸಿ.ಕೆ. ಪಡದಯ್ಯಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಪಿ. ಮೂಕಯ್ಯಸ್ವಾಮಿ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜಸ್ವಾಮಿ, ಕೆ. ಸಣ್ಣಗವಿಸಿದ್ದಪ್ಪ, ಜಿ. ಪ್ರಕಾಶ್, ಮರ್ತೂರು ಗುರುಬಸಪ್ಪ, ಕಂದಕೂರು ಹನುಮಂತಪ್ಪ, ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ, ಅರ್ಚಕ ಬಸವರಾಜಸ್ವಾಮಿ ಕಂಬಾಳಿಮಠ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry