ಸಂಸ್ಕೃತ ಮೃತಭಾಷೆ ಅಲ್ಲ: ಚಂದ್ರಕಲಾ ಕೊಂಡಿ

ಸೋಮವಾರ, ಜೂಲೈ 22, 2019
23 °C

ಸಂಸ್ಕೃತ ಮೃತಭಾಷೆ ಅಲ್ಲ: ಚಂದ್ರಕಲಾ ಕೊಂಡಿ

Published:
Updated:

ಶೃಂಗೇರಿ: ಶಿಕ್ಷಣ ಆತ್ಮ ಸಂಸ್ಕಾರವಾಗಿದ್ದು, ಸಂಸ್ಕೃತದ ಶ್ರೇಷ್ಠ ಅತ್ಯುನ್ನತ ಗ್ರಂಥಗಳಾದ ವೇದ, ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ಆತ್ಮ ಸಂಸ್ಕಾರ ಕೊಡುವ ತತ್ವ ಒಳಗೊಂಡಿವೆ ಎಂದು ರಾಜೀವ ಗಾಂಧಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕಿ  ಚಂದ್ರಕಲಾ ಕೊಂಡಿ ಹೇಳಿದರು.

ಇಲ್ಲಿನ ಚಪ್ಪರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನಡೆದ ಸಂಸ್ಕೃತ ಭಾರತೀಯ ಕಳೆದ 10 ದಿನಗಳಿಂದ ನಡೆಸಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆಗೆ ಬಂದಿರುವ ಮೃತ ಭಾಷೆ ಅಪವಾದ ಹೋಗಲಾಡಿಸಬೇಕಾದರೆ ಸಂಸ್ಕೃತವನ್ನು ಬಲ್ಲವರು ದೈನಂದಿನ ಜೀವನದಲ್ಲಿ ಸಂಸ್ಕೃತದಲ್ಲೇ ಸಂಭಾಷಿಸಬೇಕು ಎಂದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ್ ಮಾತನಾಡಿ, ಸಂಸ್ಕೃತ ಭಾರತೀಯ ಭಾಷೆಗಳ ಪೋಷಣೆಯೊಂದಿಗೆ ವಿದೇಶಿ ಭಾಷೆಗಳ ಮೇಲೂ ಪ್ರಭಾವ ಬೀರುತ್ತಿರುವುದನ್ನು ಕಾಣಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಅಧ್ಯಾಪಕ ಸಂತೋಷ್ ಕುಮಾರ್ ವಹಿಸಿದ್ದು, ಸೌಮಿತ್ರಿ. ಮಹೇಶ್ ಕಾಕತ್ಕರ್, ಬಿಂದುರಾಣಿ ಹಾಗೂ ಉಮಾ ಇದ್ದರು.

ಶಿಬಿರಾರ್ಥಿಗಳಿಂದ ಸಂಸ್ಕೃತದಲ್ಲಿ ಪ್ರಹಸನ ಸಂಭಾಷಣಾ ಪ್ರದರ್ಶನ ಹಾಡು, ನಗೆಹನಿ, ಅನುಭವ ಕಥನಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮವು ಸಂಸ್ಕೃತ ಮಾಧ್ಯಮದಲ್ಲೇ ನಡೆಯಿತು.

ಯಾಂತ್ರೀಕೃತ ನಾಟಿಗೆ ಸಹಾಯಧನ

ಶೃಂಗೇರಿ: ಪ್ರತಿ ಎಕರೆಗೆ ಭತ್ತದ ಯಾಂತ್ರಿಕೃತ ನಾಟಿ ಕಾರ್ಯಕ್ಕೆ ರೈತರಿಗೆ ಒಂದು ಸಾವಿರ ರೂಗಳನ್ನು ನೀಡಲಾಗುವುದು. ರೈತರು ಕೃಷಿ ಇಲಾಖೆಗೆ ಭೇಟಿ ನೀಡಿ  ಎಕರೆಗೆ 500 ನೀಡಿ ಹೆಸರು ನೋಂದಾಯಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಾಖೆಯಲ್ಲಿ ಸಹಾಯಧನ ರೂಪದಲ್ಲಿ ಐಈಟಿ, ಎಂಟಿಯು ಭತ್ತದ ಬೀಜ ಹಾಗೂ ಭತ್ತಕ್ಕೆ ಅತ್ಯವಶ್ಯಕವಾದ ಜಿಂಕ್ ಸಲ್ಫೇಟ್ ಲಭ್ಯವಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry