ಸೋಮವಾರ, ಏಪ್ರಿಲ್ 19, 2021
23 °C

ಸಂಸ್ಕೃತ ವಿವಿಯಿಂದ ಸಾಹಿತ್ಯ ಪುನರುಜ್ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸಂಸ್ಕೃತ ಭಾಷೆ ನಮ್ಮ ಸಂಸ್ಕೃತಿ, ಮಾತ್ರವಲ್ಲ ನಮ್ಮ ಪುರಾತನ ಜ್ಞಾನಭಂಡಾರದ ಕೀಲಿಕೈ. ಆದರೆ ನಾವಿಂದು ಅದನ್ನು ಮರೆಯುವ ಹಂತ ತಲುಪಿದ್ದೇವೆ. ಆದರೆ ಸರ್ಕಾರ ರಾಜ್ಯದಲ್ಲಿ ಸಂಸ್ಕೃತ ವಿವಿ ಸ್ಥಾಪಿಸಿ ಅದನ್ನು ನೆನಪಿಸುವ ಕೆಲಸ ಮಾಡಿದೆ ಎಂದು ಉನ್ನತ ಶಿಕ್ಷನ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದರು.ಉಡುಪಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಭಾನುವಾರ ಜರುಗಿದ ಉಡುಪಿ ತಾಲ್ಲೂಕು ವಿಪ್ರ ವಲಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಸಂಸ್ಕೃತ ಭಾಷೆಯನ್ನು ಹಲವರು ಮೃತ ಭಾಷೆ ಎಂದು ಹೇಳುತ್ತಾರೆ. ಅದು ಸರಿಯಲ್ಲ. ಆ ಭಾಷೆಯಲ್ಲಿ ರಚಿಸಿದ ಅಪಾರ ಗ್ರಂಥಗಳಲ್ಲಿ ನಮ್ಮ ಜ್ಞಾನಸಂಪತ್ತು ಅಡಗಿದೆ. ಇದನ್ನು ಅಧ್ಯಯನ ಮಾಡುವುದರೊಂದಿಗೆ ಆಧುನಿಕ ಆವಿಷ್ಕಾರಗಳೂ ಆಗಬೇಕು. ಯಾಕೆಂದರೆ ಹಳೆ ಬೇರು ಹೊಸ ಚಿಗುರು ಸೇರಿದಾಗ ಮಾತ್ರ ಸಮಾಜ ದೃಢವಾಗುತ್ತದೆ ಎಂದು ಆಚಾರ್ಯ ಹೇಳಿದರು.ಮನುಷ್ಯ ಹುಟ್ಟಿನಿಂದಲೇ ಯಾವುದೇ ಜಾತಿಯವನಾಗಿರುವುದಿಲ್ಲ. ಬ್ರಹ್ಮೋಪದೇಶದಿಂದ ದ್ವಿಜ, ಶಾಸ್ತ್ರ ಓದಿ ವಿಪ್ರ, ಆಮೇಲೆ ಆಚಾರ್ಯನಾಗುತ್ತಾನೆ. ಆದರೆ ಸಾಮಾಜಿಕ ಸಮಷ್ಟಿ ಪ್ರಜ್ಞೆಯನ್ನು ಯಾವಾತ ಬೆಳೆಸಿಕೊಂಡು ಹೋಗುತ್ತಾನೆಯೋ ಆಗ ಮಾತ್ರವೇ ಆತ ಬ್ರಾಹ್ಮಣನಾಗಬಲ್ಲ ಎಂದು ಅವರು ಹೇಳಿದರು.ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥರು ವಿಪ್ರ ಸಮ್ಮೇಳನವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಶಾಸಕ ರಘುಪತಿ ಭಟ್, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೃಷ್ಣರಾಜ ಸರಳಾಯ, ಕಾರ್ಯದರ್ಶಿ ಅರವಿಂದ ಆಚಾರ್, ಪ್ರೊ.ಎಚ್.ವಿ.ನರಸಿಂಹ ಮೂರ್ತಿ, ರಾಮದಾಸ್ ಉಡುಪ, ಅನಂತಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.