ಸಂಸ್ಕೃತ : ಹಸಿರು ಕ್ರಾಂತಿ ಅಗತ್ಯ

7

ಸಂಸ್ಕೃತ : ಹಸಿರು ಕ್ರಾಂತಿ ಅಗತ್ಯ

Published:
Updated:
ಸಂಸ್ಕೃತ : ಹಸಿರು ಕ್ರಾಂತಿ ಅಗತ್ಯ

ಬೆಂಗಳೂರು:  `ಹೊಸ ಸಾಹಿತ್ಯ ರಚನೆಯಾಗದೇ ಸಂಸ್ಕೃತ ಭಾಷೆ ಒಣಗಿದ ಮರದಂತಾಗಿದ್ದು, ಸೃಜನಶೀಲತೆಯನ್ನು ಹರಿಸುವ ಮೂಲಕ ಈ ಭಾಷಾ ಕ್ಷೇತ್ರದಲ್ಲಿ ಹಸಿರುಕ್ರಾಂತಿ ಮಾಡಬೇಕು' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.ಪ್ರತಿಭಾ ಸಂಸ್ಕೃತ ವಿದ್ಯಾಲಯವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಬಡಾನಿಡಿಯೂರು ವಾಸುದೇವ ಭಟ್ಟ ವಿರಚಿತ `ವಿವಿಧ ದೇವತಾಸ್ತುತಿ ಕುಸುಮಾಂಜಲಿ' ಕಾವ್ಯ ಬಿಡುಗಡೆಮಾಡಿ ಅವರು ಮಾತನಾಡಿದರು.`ಸಂಸ್ಕೃತ ಭಾಷೆಯಲ್ಲಿ ಹೊಸತನ್ನು ಸೃಷ್ಟಿಸುವ ಪರಂಪರೆ ಹೆಚ್ಚಬೇಕು. ಯುವಪೀಳಿಗೆಗೆ ಸಂಸ್ಕೃತದ ಬಗ್ಗೆ ಆಸಕ್ತಿ ಇಲ್ಲದೇ ಇರುವುದು ಕಂಡುಬರುತ್ತದೆ. ಹಾಗೆಂದು ಭಾಷೆ ಎಂದಿಗೂ ನಿಸ್ತೇಜಗೊಂಡಿಲ್ಲ' ಎಂದು ಹೇಳಿದರು.  `ಕನ್ನಡ ಭಾಷೆಯಲ್ಲಿ ಸಂಸ್ಕೃತ ಹಾಲು ಮತ್ತು ಸಕ್ಕರೆಯಂತೆ ಬೆರೆಯಬೇಕು. ಆದರೆ ಕನ್ನಡದೊಂದಿಗೆ ಇಂಗ್ಲಿಷ್ ಬೆರೆತು ಅಕ್ಕಿಯಲ್ಲಿ ಕಲ್ಲು ಸಿಕ್ಕಿದಂತಾಗಿದೆ. ಈ ಬಗ್ಗೆ ಸಂಸ್ಕೃತ ವಿದ್ವಾಂಸರು ಮತ್ತು ಕನ್ನಡ ವಿದ್ವಾಂಸರು ಒಟ್ಟುಗೂಡಿ ಚಿಂತನೆ ನಡೆಸಬೇಕು' ಎಂದು ತಿಳಿಸಿದರು. ಗಾಯಕ ವಿದ್ಯಾಭೂಷಣ ಅವರು `ಗಣೇಶವಾಣಿ' ಎಂಬ ಸಿ.ಡಿ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry