ಬುಧವಾರ, ಏಪ್ರಿಲ್ 14, 2021
25 °C

ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ನಕಾರಾತ್ಮಕ ಚಿಂತನೆಯಿಂದ ನಮ್ಮಲ್ಲಿರುವ ಶಕ್ತಿಗಳು ಕುಂಠಿತಗೊಂಡು ಅವನತಿಯತ್ತ ಸಾಗುತ್ತೇವೆ. ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಸ್ಪೂರ್ತಿ ಉಕ್ಕಿ ಮಾಡಿದ ಕೆಲಸವೆಲ್ಲವೂ ಯಶಸ್ವಿಯಾಗುತ್ತದೆ ಎಂದು ಮರಕಡ ಶ್ರೀಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ತಿಳಿಸಿದರು.ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ದೇವರ ಮೇಲಿನ ನಂಬಿಕೆ, ಶ್ರದ್ಧೆ ನಮ್ಮಲ್ಲಿ ಚೈತನ್ಯ ಮೂಡಿಸುತ್ತದೆ. ದೇವರ ಧ್ಯಾನ ಸದಾ ಮನಸ್ಸಿನಲ್ಲಿದ್ದರೆ ಕೈಗೊಂಡ ಕಾರ್ಯಗಳೆಲ್ಲ ಕೈಗೂಡುತ್ತದೆ ಎಂದವರು ಹೇಳಿದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಡಾ.ಸುಂದರ ನಾಯ್ಕಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕೃಷಿಕರ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ, ಸುಳ್ಯ ಪಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎನ್.ಎ.ರಾಮಚಂದ್ರ ಮುಖ್ಯ ಅತಿಥಿಗಳಾಗಿದ್ದರು.ಆಡಳಿತ ಸಮಿತಿ ಅಧ್ಯಕ್ಷ ಕೊಯಿಂಗಾಜೆ ರಾಮಕೃಷ್ಣ ಗೌಡ, ಸಮಿತಿ ಕೋಶಾಧಿಕಾರಿ ದಾಮೋದರ ನಾರ್ಕೋಡು, ಪ್ರಧಾನ ಕಾರ್ಯದರ್ಶಿ ದಿನೇಶ್ ಕೋಲ್ಚಾರ್, ಉಪಾಧ್ಯಕ್ಷ ಜೆ.ಕೆ.ರೈ, ಕಾರ್ಯದರ್ಶಿ ಪಿ.ಎಂ.ರಂಗನಾಥ್, ಆಲೆಟ್ಟಿ ಗ್ರಾಪಂ ಅಧ್ಯಕ್ಷ ಮುತ್ತಪ್ಪ ಪೂಜಾರಿ, ಕಾರ್ಯಾದ್ಯಕ್ಷ ಕೆ.ವಿ.ಹೇಮನಾಥ್, ಉಪಾಧ್ಯಕ್ಷ ಕೃಪಾ ಶಂಕರ ತುದಿಯಡ್ಕ, ಯಶವಂತ ಕುಡೆಕಲ್ಲು, ದಯಾನಂದ ಪತ್ತುಕುಂಜ, ಶಿವಪ್ರಸಾದ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.