`ಸಕಾಲ'ದಲ್ಲಿ ಖಾತಾ ನೋಂದಣಿ

7

`ಸಕಾಲ'ದಲ್ಲಿ ಖಾತಾ ನೋಂದಣಿ

Published:
Updated:

ಬೆಂಗಳೂರು: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ 5 ಸೇವೆಗಳನ್ನು ನೀಡಲಾಗುತ್ತಿದ್ದು, ಡಿಸೆಂಬರ್ 3 ರಿಂದ ಖಾತಾ ವರ್ಗಾವಣೆ, ಖಾತಾ ನೋಂದಣಿ ಹೆಚ್ಚುವರಿ ಸೇವೆಗಳನ್ನು ನೀಡಲಾಗುತ್ತಿದೆ.

ನಾಗರಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ (ಬಿಬಿಎಂಪಿ ವ್ಯಾಪ್ತಿಯಲ್ಲಿ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳು ಇರುತ್ತವೆ) ಕಚೇರಿಗಳಲ್ಲಿ ರೂ.5/-ನ್ನು ಪಾವತಿಸಿ ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ, ಭರ್ತಿ ಮಾಡಿದ ಅರ್ಜಿಯನ್ನು ಸಹಾಯಕ ಕಂದಾಯ ಅಧಿಕಾರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ 15 ಸಂಖ್ಯೆಯ ಜಿ.ಎಸ್.ಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು. ಈ ಸೇವೆಗಳನ್ನು ಪಡೆಯಲು 30 ದಿನಗಳನ್ನು ನಿಗದಿಪಡಿಸಲಾಗಿದೆ.

30 ದಿವಸದೊಳಗೆ ಈ ಕೆಲಸ ಆಗದಿದ್ದಲ್ಲಿ, ಕಂದಾಯ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.  ಈ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರೆ ಕೇಂದ್ರದ ಸಂಖ್ಯೆ: 080 -44554455 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರು ಸಲ್ಲಿಸಬಹುದು.

ಯಾವ ದಾಖಲೆಗಳು ಬೇಕು

ಖಾತಾ ನೋಂದಣಿಗೆ ಸಂಬಂಧಪಟ್ಟಂತೆ ನಮೂನೆಯಲ್ಲಿ  ಅರ್ಜಿ, ದಸ್ತಾವೇಜಿನ ದೃಢೀಕೃತ ಪ್ರತಿ, ಹಿಂದಿನ 10 ವರ್ಷಗಳ ಋಣಭಾರ ಪತ್ರ (ಫಾರಂ-15ರಲ್ಲಿ), ಸಂಬಂಧಪಟ್ಟ ಸಕ್ಷಮ ಅಧಿಕಾರಿಯಿಂದ ನೀಡಲಾದ ಭೂ ಪರಿವರ್ತನಾ ಪತ್ರ,  ಸರ್ವೆ ನಕ್ಷೆ/ಟಿಪ್ಪಣಿ ಪ್ರತಿಗಳು , ಭೂ ವಿಂಗಡನೆಯ ಸಂಬಂಧಪಟ್ಟ ನಗರ ಯೋಜನಾ ಇಲಾಖೆ/ಬಿ.ಡಿ.ಎಯಿಂದ ನೀಡಲಾದ ನಿರಾಕ್ಷೇಪಣ ಪತ್ರ ನೀಡಬೇಕು.

ಖಾತಾ ವರ್ಗಾವಣೆಗೆ ಸಂಬಂಧಪಟ್ಟ ನಮೂನೆಯಲ್ಲಿ  ಅರ್ಜಿ,  ಹಿಂದಿನ ಸಾಲಿನ ಕರ ಸಲ್ಲಿಸಲಾಗಿರುವ ಕರಪತ್ರಗಳು,  ಹಕ್ಕು ನಿರೂಪಣಾ ಪತ್ರ,  ಪಿತ್ರಾರ್ಜಿತ, ಉಡುಗೊರೆ ಪತ್ರ, ಮರಣ ಹೊಂದಿದರೆ ಮರಣ ಪ್ರಮಾಣ ಪತ್ರ ನೀಡಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry