ಸಕಾಲದಲ್ಲಿ ಸಾಲ ಮರುಪಾವತಿಸಿ

7

ಸಕಾಲದಲ್ಲಿ ಸಾಲ ಮರುಪಾವತಿಸಿ

Published:
Updated:

ಅರಕಲಗೂಡು: ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕ್‌ಗಳು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಅಧ್ಯಕ್ಷೆ ಎಲ್.ಟಿ. ಅಂಬುಜಾಕ್ಷಿ ಅಭಿಪ್ರಾಯಪಟ್ಟರು. ಕಟ್ಟಡಕ್ಕೆ ಸೋಮವಾರ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎಚ್.ಕೆ. ಶಿವಕುಮಾರ್ ಮಾತನಾಡಿ, ತಮ್ಮ ಶಾಖೆ ರೂ.16 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ.20 ಕೋಟಿಗಳನ್ನು ಸಾಲದ ರೂಪದಲ್ಲಿ ನೀಡಿದೆ ಎಂದರು. 115 ಮಹಿಳಾ ಸಂಘಗಳಿಗೆ ರೂ.2.40 ಕೋಟಿ ಸಾಲ ನೀಡಲಾಗಿದೆ. ಚಿನ್ನದ ಮೇಲೆ ರೂ.2.40 ಕೋಟಿ ಸಾಲ ನೀಡಿ ರೈತರು, ವ್ಯಾಪಾರಸ್ಥರು, ಉದ್ದಿಮೆದಾರರಿಗೆ ನೆರವು ಒದಗಿಸಿದೆ ಎಂದರು.ನೂತನ ಕಟ್ಟಡವನ್ನು ಉದ್ಘಾಟಿಸಿದ ತಹಸೀಲ್ದಾರ್ ಎಂ.ಆರ್.ಜಗದೀಶ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಈ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಇಲ್ಲಿನ ಜನರಿಗೆ ಬ್ಯಾಂಕ್ ಸೇವೆ ದೊರಕಿಸಿ ಕೊಟ್ಟಂತಾಗಿದೆ ಎಂದರು.ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಜನಾರ್ದನಯ್ಯ, ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಲ್.ವೆಂಕಟೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಪಿ. ಜಯಪ್ಪ, ಎಸ್.ಬಿ.ಎಂ. ವ್ಯವಸ್ಥಾಪಕಿ ರತ್ನಾವತಿ, ಬ್ಯಾಂಕಿನ ಪ್ರಮುಖ ಗ್ರಾಹಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry