ಮಂಗಳವಾರ, ಮೇ 11, 2021
19 °C

ಸಕಾಲದಲ್ಲಿ ಸೇವೆ ನಾಗರಿಕರ ಹಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ಕಾಲಮಿತಿಯಲ್ಲಿ ಸೇವೆ ಪಡೆಯುವುದು ನಾಗರಿಕರ ಹಕ್ಕು. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಏಪ್ರಿಲ್ 2ರಂದು ರಾಜ್ಯದ ಎಲ್ಲೆಡೆ ಜಾರಿಯಾಗಿದೆ `ಸಕಾಲ~. ಪ್ರಸ್ತುತ ರಾಜ್ಯ ಸರ್ಕಾರದ 11 ಇಲಾಖೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.ಯಾವ ಇಲಾಖೆಯ ಯಾವ ಸೇವೆ ಎಷ್ಟು ದಿನಗಳಲ್ಲಿ ಸಾರ್ವಜನಿಕರಿಗೆ ದೊರೆಯಬೇಕು? ಸೇವೆ ನೀಡಬೇಕಾದ ಅಧಿಕಾರಿ ಯಾರು? ಸಕಾಲದಲ್ಲಿ ಸೇವೆ ದೊರೆಯದಿದ್ದರೆ ಮೊರೆ ಹೋಗಬೇಕಾದ ಮೇಲಧಿಕಾರಿ ಯಾರು? ಈ ಕುರಿತ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸೇವಾ ವಿವರ `ಪ್ರಜಾವಾಣಿ~ಯಲ್ಲಿ ಬುಧವಾರದಿಂದ ಪ್ರಕಟವಾಗಲಿದೆ. ಕಂದಾಯ ಇಲಾಖೆಯ ಸೇವೆಗಳ ಕುರಿತು ಮಾಹಿತಿ ಇಲ್ಲಿದೆ. * ಸಂಬಂಧಪಟ್ಟ ಅಧಿಕಾರಿಯು ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಸೇವೆ ಒದಗಿಸಲು ವಿಫಲವಾದರೆ, ಸಕ್ಷಮ ಅಧಿಕಾರಿಗೆ ಒಂದು ತಿಂಗಳಲ್ಲಿ ಮನವಿ ಸಲ್ಲಿಸಬಹುದು. ಸೇವೆ ನೀಡುವಲ್ಲಿ ವಿಫಲವಾದ ಸರ್ಕಾರಿ ನೌಕರನಿಗೆ ದಂಡ ವಿಧಿಸುವ ಅಧಿಕಾರ ಸಕ್ಷಮ ಅಧಿಕಾರಿಗೆ ಇದೆ.* ಸಕ್ಷಮ ಅಧಿಕಾರಿ ಸಕಾಲದಲ್ಲಿ ಸ್ಪಂದಿಸದೆ ಇದ್ದಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದು ತಿಂಗಳಲ್ಲಿ ದೂರು ಸಲ್ಲಿಸಬಹುದು.* ಯಾವುದೇ ಸೇವೆಯನ್ನು ಕೋರಿ ಅರ್ಜಿ ಸಲ್ಲಿಸಿದಾಗ, ಸಂಬಂಧಪಟ್ಟ ಅಧಿಕಾರಿಯಿಂದ ಜಿಎಸ್‌ಸಿ ಸಂಖ್ಯೆ ಇರುವ ಹಿಂಬರಹ ಪಡೆದುಕೊಳ್ಳಬೇಕು. ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ವೆಬ್‌ಸೈಟ್, ಎಸ್‌ಎಂಎಸ್ ಅಥವಾ ಸಹಾಯವಾಣಿಯ ಮೂಲಕ ತಿಳಿದುಕೊಳ್ಳಲು ಜಿಎಸ್‌ಸಿ ಸಂಖ್ಯೆ ಅಗತ್ಯ.* `ಸಕಾಲ~ ವೆಬ್‌ಸೈಟ್‌ನ (http://sakala.kar.nic.in/) ಬಲಭಾಗದಲ್ಲಿರುವ `ಸೇವೆಗಳ ಸ್ಥಾನಮಾನ ಪರಿಶೀಲಿಸಿ~ ಸ್ಥಳದಲ್ಲಿ `ಜಿಎಸ್‌ಸಿ~ ಸಂಖ್ಯೆ ನಮೂದಿಸಿ, ಅರ್ಜಿ ಯಾವ ಹಂತದಲ್ಲಿ ಇದೆ ಎಂಬುದನ್ನು ಪರೀಕ್ಷಿಸಬಹುದು.* `ಜಿಎಸ್‌ಸಿ 15 ಅಂಕಿಗಳ ಸಂಖ್ಯೆ~ಯನ್ನು ಮೊಬೈಲ್ ದೂರವಾಣಿಯಲ್ಲಿ ಟೈಪ್ ಮಾಡಿ (ಉದಾ:- ಜಿಎಸ್‌ಸಿ 12345....) 92433-55223 ಅಥವಾ 092123-57123 ಸಂಖ್ಯೆಗೆ ಎಸ್‌ಎಂಎಸ್ ಮಾಡಿದರೆ, ಅರ್ಜಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇರುವ ಎಸ್‌ಎಂಎಸ್ ಕೆಲವೇ ಸಮಯದಲ್ಲಿ ಮೊಬೈಲ್‌ಗೆ ಬರುತ್ತದೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.