ಮಂಗಳವಾರ, ನವೆಂಬರ್ 19, 2019
28 °C

ಸಕ್ಕರೆ ಉತ್ಪಾದನೆ ಕುಸಿತ

Published:
Updated:

ನವದೆಹಲಿ(ಪಿಟಿಐ): ಸಕ್ಕರೆ ಉತ್ಪಾದನೆ 2012-13ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ(ಸೆಪ್ಟೆಂಬರ್-ಅಕ್ಟೋಬರ್) ಈವರೆಗೆ ಶೇ 2ರಷ್ಟು ಕುಸಿತ ಕಂಡಿದ್ದು 241ಲಕ್ಷ ಟನ್‌ನಷ್ಟಿದೆ ಎಂದು  ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಹೇಳಿದೆ.

2011-12ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ 260 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು.ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಉತ್ಪಾದನೆ ಆಗಿದೆ.  ಒಟ್ಟು 131 ಸಕ್ಕರೆ ಕಾರ್ಖಾನೆಗಳಲ್ಲಿ 24 ಕೋಟಿ ಟನ್ ಕಬ್ಬು ಅರೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಶೇ 10ರಷ್ಟು ತಗ್ಗಿದ್ದು, 33 ಲಕ್ಷ ಟನ್‌ಗಳಿಗೆ ಇಳಿದಿದೆ.ಉತ್ತರ ಪ್ರದೇಶದಲ್ಲಿ 72 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿದ್ದು ಶೇ 5ರಷ್ಟು ಪ್ರಗತಿಯಾಗಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ 14.7 ಲಕ್ಷ ಮತ್ತು 9.80 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿದೆ.

ಪ್ರತಿಕ್ರಿಯಿಸಿ (+)