ಸಕ್ಕರೆ ಉತ್ಪಾದನೆ ಹೆಚ್ಚಳ ನಿರೀಕ್ಷೆ

ಬುಧವಾರ, ಜೂಲೈ 24, 2019
23 °C

ಸಕ್ಕರೆ ಉತ್ಪಾದನೆ ಹೆಚ್ಚಳ ನಿರೀಕ್ಷೆ

Published:
Updated:

ಮುಂಬೈ (ಪಿಟಿಐ): ಮುಂದಿನ ವರ್ಷದ ಸಕ್ಕರೆ ಋತುವಿನಲ್ಲಿ ದೇಶದಲ್ಲಿ ಸಕ್ಕರೆ ಉತ್ಪಾದನೆಯು ಶೇ 10ರಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದಲ್ಲಿ  ಬ್ರೆಜಿಲ್ ನಂತರದ ಎರಡನೇ ಸ್ಥಾನದಲ್ಲಿ ಇರುವ ಭಾರತದಲ್ಲಿ,  2011-12ನೇ ಸಾಲಿನ ಸಕ್ಕರೆ ವರ್ಷದಲ್ಲಿ 26.5 ದಶಲಕ್ಷ ಟನ್‌ಗಳಷ್ಟು  ಉತ್ಪಾದನೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.ಕಬ್ಬು ಬೆಳೆಯುವ ಪ್ರದೇಶವು ವಿಸ್ತರಣೆ ಆಗಿರುವುದರಿಂದ ಮುಂದಿನ ವರ್ಷದ  ಸಕ್ಕರೆ ಋತುವಿನಲ್ಲಿ (ಅಕ್ಟೋಬರ್ - ಸೆಪ್ಟೆಂಬರ್) ಉತ್ಪಾದನೆ ಹೆಚ್ಚಲಿದೆ ಎಂದು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘವು (ಐಎಸ್‌ಎಂಎ) ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ 24.2 ದಶಲಕ್ಷ ಟನ್‌ಗಳಷ್ಟು ಉತ್ಪಾದನೆಯಾಗುವ ಅಂದಾಜು ಮಾಡಲಾಗಿದೆ.  2009-10ರಲ್ಲಿ ಇದು 19 ದಶಲಕ್ಷ ಟನ್‌ಗಳಷ್ಟಿತ್ತು.ದೇಶದಲ್ಲಿನ ಸಕ್ಕರೆ ಬೇಡಿಕೆಯು 22 ರಿಂದ 22.5 ದಶಲಕ್ಷ ಟನ್‌ಗಳಷ್ಟಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ 1.5 ದಶಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದೂ `ಐಎಸ್‌ಎಂಎ~ ಒತ್ತಾಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry