ಸಕ್ಕರೆ ರಫ್ತಿಗೆ ಮುಕ್ತ ಅವಕಾಶ

7

ಸಕ್ಕರೆ ರಫ್ತಿಗೆ ಮುಕ್ತ ಅವಕಾಶ

Published:
Updated:
ಸಕ್ಕರೆ ರಫ್ತಿಗೆ ಮುಕ್ತ ಅವಕಾಶ

ನವದೆಹಲಿ(ಪಿಟಿಐ): ಸಕ್ಕರೆ ಉತ್ಪಾದನೆಯು ದೇಶೀಯ ಬೇಡಿಕೆಗಿಂತ ಹೆಚ್ಚುವ ನಿರೀಕ್ಷೆ ಇದ್ದು, ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್-ಸೆಪ್ಟೆಂಬರ್ ಅವಧಿ) `ಮುಕ್ತ ಸಕ್ಕರೆ ರಫ್ತು ನೀತಿ~ ಮುಂದುವರೆಯಲಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ಕೆ.ವಿ.ಥಾಮಸ್ ಸೋಮವಾರ ಇಲ್ಲಿ ಹೇಳಿದ್ದಾರೆ.ಸಕ್ಕರೆ ವಲಯ ಭಾಗಶಃ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸು ವುದಕ್ಕೆ ಸಂಬಂಧಿಸಿದಂತೆ ರಂಗರಾಜನ್ ಸಮಿತಿ ನೀಡಿರುವ ಶಿಫಾರಸುಗಳ ಕುರಿತು ಕೆ.ವಿ.ಥಾಮಸ್ ಮತ್ತು ಕೃಷಿ ಸಚಿವ ಶರದ್ ಪವಾರ್ ಸೋಮವಾರ ಇಲ್ಲಿ ಚರ್ಚೆ ನಡೆಸಿದರು.ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 235 ಲಕ್ಷ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷಿಸಲಾಗಿದೆ. ದೇಶೀಯ ಬೇಡಿಕೆ 220 ಲಕ್ಷ ಟನ್‌ನಷ್ಟಿದೆ ಎಂದು ಥಾಮಸ್ ವಿವರಿಸಿದರು.

ಕಳೆದ ಮಾರುಕಟ್ಟೆ ವರ್ಷ 35 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry