ಸಕ್ಕರೆ ರಫ್ತು: ಶೀಘ್ರವೇ ಕೇಂದ್ರಕ್ಕೆ ರಾಜ್ಯ ನಿಯೋಗ

7

ಸಕ್ಕರೆ ರಫ್ತು: ಶೀಘ್ರವೇ ಕೇಂದ್ರಕ್ಕೆ ರಾಜ್ಯ ನಿಯೋಗ

Published:
Updated:

ದಾವಣಗೆರೆ: ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಉತ್ಪಾದನೆ ನಡೆಸುವೆ. ಆದ್ದರಿಂದ ಸಕ್ಕರೆ ರಫ್ತು ಸಂಬಂಧ ಶೀಘ್ರವೇ ಕೇಂದ್ರಕ್ಕೆ ನಿಯೋಗ ಕೊಂಡು ಹೋಗಿ ಕೃಷಿ ಸಚಿ ಶರದ್ ಪವಾರ್ ಅವರನ್ನು ಭೇಟಿ ಮಾಡಲಾಗುವುದು ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 20ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಈ ವರ್ಷ 21 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ ವೇಳೆಗೆ ಉತ್ಪಾದನೆಯ ನಿಖರ ಲೆಕ್ಕಾಚಾರ ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ರಫ್ತು ಮಾಡಲು ಅನುಮತಿ ಅಗತ್ಯ. ಅಲ್ಲದೆ ದಾಳಿಂಬೆ ಬೆಳೆಗಾರರ ವಿವಿಧ ಸಮಸ್ಯೆ ಕುರಿತು ಮನವರಿಕೆ ಮಾಡುವುದೂ ಸೇರಿದಂತೆ ಹಲವಾರು ವಿಷಯ ಚರ್ಚಿಸಲು ಲ್ಲಿಶೀಘ್ರವೇ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಲಾಗುವುದು ಎಂದರು.ದಾವಣಗೆರೆಯ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಸಂಬಂಧಿಸಿದಂತೆ ವಿಜಯನಗರ ಶುಗರ್ಸ್ ಟೆಂಡರು ಅರ್ಜಿ ಸಲ್ಲಿಸಿದೆ. ಆದರೆ, ಅರ್ಜಿದಾರರೇ ಹಲವಾರು ನಿಬಂಧನೆಗಳನ್ನು ವಿಧಿಸಿದ್ದಾರೆ. ಅದನ್ನು ತೆರವುಗೊಳಿಸಿದಲ್ಲಿ ಆರ್ಥಿಕ ಬಿಡ್ ಪ್ರಕಟಿಸಲಾಗುವುದು. ಇಲ್ಲವಾದಲ್ಲಿ ಕಾರ್ಖಾನೆಯನ್ನು ಹರಾಜು ಹಾಕಲಾಗುವುದು ಎಂದು ಹೇಳಿದರು. ದಾಳಿಂಬೆ ಬೆಳೆಗಾರರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry