ಗುರುವಾರ , ಮಾರ್ಚ್ 4, 2021
30 °C

ಸಗಟು ಹಣದುಬ್ಬರ ಅಲ್ಪ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಗಟು ಹಣದುಬ್ಬರ ಅಲ್ಪ ಏರಿಕೆ

ನವದೆಹಲಿ (ಪಿಟಿಐ): ಬೇಳೆಕಾಳು, ತರಕಾರಿಗಳ ಧಾರಣೆ ಹೆಚ್ಚಿರುವುದರಿಂದ ಸಗಟು ಹಣದುಬ್ಬರ ಡಿಸೆಂಬರ್‌ ತಿಂಗಳಿನಲ್ಲಿ ಶೇ (–) 0.73ಕ್ಕೆ ಏರಿಕೆಯಾಗಿದೆ.ಸಗಟು ದರ ಸೂಚ್ಯಂಕ (ಡಬ್ಲ್ಯುಟಿಐ) ಆಧರಿಸಿದ ಹಣದುಬ್ಬರ ಕಳೆದ ನಾಲ್ಕು ತಿಂಗಳಿನಿಂದ ಮತ್ತು ನವೆಂಬರ್‌ನಲ್ಲಿ ಶೇ (–) 1.99ರಷ್ಟಿತ್ತು. 2014ರ ಡಿಸೆಂಬರ್‌ನಲ್ಲಿ ಶೇ (–) 0.50ರಷ್ಟಿತ್ತು.2014ರ ನವೆಂಬರ್‌ನಿಂದಲೂ ಅಂದರೆ 14 ತಿಂಗಳಿನಿಂದ ಸಗಟು ಹಣದುಬ್ಬರ ಋಣಾತ್ಮಕ ಮಟ್ಟದಲ್ಲಿಯೇ ಇದೆ. ಬೇಳೆಕಾಳುಗಳು ಶೇ 56ರಷ್ಟು ಮತ್ತು ಈರುಳ್ಳಿ ಶೇ 26ರಷ್ಟು ತಟ್ಟಿಯಾಗಿವೆ.ತರಕಾರಿಗಳ ಧಾರಣೆ ಶೇ 21ರಷ್ಟು, ಹಣ್ಣುಗಳ ಬೆಲೆ ಶೇ 0.76ರಷ್ಟು ಏರಿಕೆಯಾಗಿವೆ. ಅಂತೆಯೇ ಆಲೂಗೆಡ್ಡೆ ಬೆಲೆ ಶೇ 35ರಷ್ಟು ಹೆಚ್ಚಿದ್ದರೆ, ಮೀನು, ಮಾಂಸ ಮತ್ತು ಮೊಟ್ಟೆ ದರವೂ ಶೇ 5.03ರಷ್ಟು ಹೆಚ್ಚಾಗಿದೆ.ಇಂಧನ ಮತ್ತು ವಿದ್ಯುತ್, ತಯಾರಿಕಾ ವಲಯದ ಪ್ರಗತಿಯೂ ಋಣಾತ್ಮಕ ಮಟ್ಟದಲ್ಲಿಯೇ ಇವೆ. ಆಹಾರ ಹಣದುಬ್ಬರ:  ನವೆಂಬರ್‌ನಲ್ಲಿ ಶೇ 5.20 ರಷ್ಟಿದ್ದ ಆಹಾರ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 8.17ಕ್ಕೆ ಭಾರಿ ಏರಿಕೆ ಕಂಡಿದೆ.ಆರ್‌ಬಿಐ ಮೇಲೆ ಒತ್ತಡ: ಕೈಗಾರಿಕಾ ಪ್ರಗತಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ 3.2ಕ್ಕೆ ಇಳಿಕೆಯಾಗಿದೆ. ಹೀಗಾಗಿ ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ತಗ್ಗಿಸುವ ಒತ್ತಡ ಎದುರಾಗಿದೆ.ಕೈಗಾರಿಕಾ ಪ್ರಗತಿಯ ಇತ್ತೀಚಿನ ಪ್ರಗತಿ ಗಮನಿಸಿ ಬಡ್ಡಿದರ ಕಡಿತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌  ಬುಧವಾರ ಹೇಳಿದ್ದಾರೆ.ಚಿಲ್ಲರೆ ಹಣದುಬ್ಬರ ಸತತ ಐದನೇ ತಿಂಗಳಿನಲ್ಲಿಯೂ ಏರುಮುಖವಾಗಿದ್ದು ಡಿಸೆಂಬರ್‌ನಲ್ಲಿ ಶೇ 5.61ಕ್ಕೆ ಏರಿಕೆಯಾಗಿದೆ. ಹೀಗಾಗಿ, ಫೆಬ್ರುವರಿ 2ರಂದುನಡೆಯುವ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ತಗ್ಗಲಿದೆ ಎಂದು ಉದ್ಯಮಿಗಳು ನಿರೀಕ್ಷೆ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.