ಸಗಟು ಹಣದುಬ್ಬರ ಇಳಿಕೆ

7

ಸಗಟು ಹಣದುಬ್ಬರ ಇಳಿಕೆ

Published:
Updated:
ಸಗಟು ಹಣದುಬ್ಬರ ಇಳಿಕೆ

ನವದೆಹಲಿ (ಪಿಟಿಐ): ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ (ಡಬ್ಲ್ಯುಪಿಐ) ಜುಲೈ ತಿಂಗಳಲ್ಲಿ ಎಂಟು ತಿಂಗಳ ಹಿಂದಿನ ಮಟ್ಟ ಶೇ 9.22ಕ್ಕೆ ಇಳಿಕೆ ಕಂಡಿದೆ. ತಯಾರಿಕೆ ಕ್ಷೇತ್ರ ಗಣನೀಯವಾಗಿ ಚೇತರಿಸಿಕೊಂಡಿರುವುದು ಮತ್ತು ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, `ಡಬ್ಲ್ಯುಪಿಐ~ ಜೂನ್ ತಿಂಗಳ ಶೇ 9.44ರಿಂದ ಶೇ 9.22ರಕ್ಕೆ ಇಳಿಕೆ ಕಂಡಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ 9.98ರಷ್ಟಿತ್ತು.ಸರ್ಕಾರ ಮಂಗಳವಾರ  ಈ ಪರಿಷ್ಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಮೇ ತಿಂಗಳ ವೇಳೆಗೆ ಅಂದಾಜಿಸಲಾಗಿದ್ದ ಒಟ್ಟಾರೆ ಹಣದುಬ್ಬರ ದರ ಶೇ 9.06ರಿಂದ ಶೇ 9.56ಕ್ಕೆ ಏರಿಕೆ ಕಾಣಲಿದೆ ಎಂದು ಎಂದು ಹೇಳಿದೆ.ಜುಲೈ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ 8.19ರಷ್ಟಾಗಿದ್ದು, ಜೂನ್ ತಿಂಗಳ ಶೇ 8.38ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರಕ್ಕೆ ಈ ಪ್ರಾಥಮಿಕ ಸರಕುಗಳು ಶೇ 20ರಷ್ಟು ಕೊಡುಗೆ ನೀಡುತ್ತವೆ.

 

`ಡಬ್ಲ್ಯುಪಿಐ~ಗೆ ಶೇ 60ರಷ್ಟು ಕೊಡುಗೆ ನೀಡುವ ತಯಾರಿಕೆ ಉತ್ಪನ್ನಗಳು ಜುಲೈ ತಿಂಗಳಲ್ಲಿ ಶೇ 7.49ರಷ್ಟು ಏರಿಕೆ ಕಂಡಿವೆ. ತಯಾರಿಕಾ ಉತ್ಪನ್ನಗಳ ಮೇಲಿನ ಹಣದುಬ್ಬರ ದರ ಕಳೆದ ಫೆಬ್ರುವರಿ ತಿಂಗಳಿಂದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದು, ಜೂನ್ ತಿಂಗಳಲ್ಲಿ ಶೇ 7.43ರಷ್ಟಾಗಿತ್ತು.

 

ತೈಲ ಮತ್ತು ಇಂಧನ ಸೂಚ್ಯಂಕ ಜುಲೈ ತಿಂಗಳಲ್ಲಿ ಶೇ 12.85ರಿಂದ ಶೇ 12.04ಕ್ಕೆ ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಆಹಾರೇತರ ಸರಕುಗಳ ಹಣದುಬ್ಬರ ದರ ಶೇ 18.57ರಿಂದ ಶೇ 15.51ಕ್ಕೆ ಇಳಿಕೆಯಾಗಿದೆ.

ಜುಲೈ ತಿಂಗಳ `ಡಬ್ಲ್ಯುಪಿಐ~ ದರ ಕಳೆದ ಎಂಟು ತಿಂಗಳ ಹಿಂದಿನ ಮಟ್ಟದ್ದಾಗಿದೆ. ನವೆಂಬರ್ 2010ರಲ್ಲಿ ಕನಿಷ್ಠ ಮಟ್ಟದ ಶೇ 8.20ರಷ್ಟು `ಡಬ್ಲ್ಯುಪಿಐ~ ದಾಖಲಾಗಿತ್ತು.ಪ್ರಣವ್ ಪ್ರತಿಕ್ರಿಯೆ: ಸಗಟು ಬೆಲೆ ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರ ದರ ಕುಸಿದಿರುವುದು ಮತ್ತು ಉತ್ತಮ ಮುಂಗಾರು ಲಭಿಸಿರುವುದು ಒಟ್ಟಾರೆ ಹಣದುಬ್ಬರ ದರ ಕುಸಿಯುವಂತೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಮುಂಗಾರು ಚುರುಕುಗೊಂಡರೆ ಸಹಜವಾಗಿಯೇ ಉತ್ಪಾದನೆ ಹೆಚ್ಚಲಿದ್ದು, ಆಹಾರ ಪೂರೈಕೆ ಸರಪಣಿ ಸರಿಯಾಗಲಿದೆ. ಜುಲೈ ತಿಂಗಳಲ್ಲಿ ಆಹಾರ ಮತ್ತು ಆಹಾರೇತರ ಪದಾರ್ಥಗಳ ಬೆಲೆ ಇಳಿಕೆ ಕಂಡಿರುವುದು ಶುಭ ಸುದ್ದಿ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry