ಸಚಿನ್ಗೂ ಮೇಲೆ ಮಹೇಂದ್ರ ಸಿಂಗ್ ದೋನಿ
ಲಂಡನ್ (ಪಿಟಿಐ): ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ಮೇಲಿದ್ದಾರೆ ಮಹೇಂದ್ರ ಸಿಂಗ್ ದೋನಿ!
ಹೌದು; `ಫೋಬ್ಸ್~ ನಿಯತಕಾಲಿಕವು ಇತ್ತೀಚೆಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ `ಮಹಿ~ಗೆ 31ನೇ ಸ್ಥಾನ ಸಿಕ್ಕಿದೆ. ಸಚಿನ್ ಮೊದಲ ನೂರು ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಇದ್ದಾರೆ. ಆದರೆ ಅವರಿಗೆ ಸಿಕ್ಕಿರುವುದು 78ನೇ ಸ್ಥಾನ.
ಜಾಹೀರಾತು ಒಪ್ಪಂದ ಸೇರಿದಂತೆ ವಿವಿಧ ಮೂಲಗಳಿಂದ ಬರುವ ಆದಾಯದ ಲೆಕ್ಕಾಚಾರದಲ್ಲಿ ಮಾಡಲಾಗಿರುವ ಈ ಪಟ್ಟಿಯಲ್ಲಿ ದೋನಿ ಗಳಿಕೆ 26.5 ದಶಲಕ್ಷ ಅಮೆರಿಕನ್ ಡಾಲರ್. ಅಂದರೆ ಸುಮಾರು 132 ಕೋಟಿ ರೂಪಾಯಿ. ಅದೇ ತೆಂಡೂಲ್ಕರ್ ಗಳಿಸಿರುವ ಮೊತ್ತವನ್ನು ಈ ನಿಯತಕಾಲಿಕವು 18.6 ದಶಲಕ್ಷ ಡಾಲರ್ ಎಂದು ದಾಖಲಿಸಿದೆ.
ವಿಶ್ವಕಪ್ ವಿಜಯದ ನಂತರ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ದೋನಿ ಆದಾಯವು `ಸ್ಪ್ರಿಂಟ್ ಕಿಂಗ್~ ಖ್ಯಾತಿಯ ಅಥ್ಲೀಟ್ ಉಸೇನ್ ಬೋಲ್ಟ್ ಹಾಗೂ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಹೆಚ್ಚು ಎನ್ನುವುದು ಫೋಬ್ಸ್ ಅಭಿಪ್ರಾಯ. ಜೊಕೊವಿಚ್ ಹಾಗೂ ಬೋಲ್ಟ್ ಕ್ರಮವಾಗಿ 62 ಹಾಗೂ 63ನೇ ಸ್ಥಾನದಲ್ಲಿದ್ದಾರೆ.
ಅತಿ ಶ್ರೀಮಂತ ಕ್ರೀಡಾಪಟುಗಳ ಮೊದಲ ಹತ್ತರ ಪಟ್ಟಿಯಲ್ಲಿ ಎತ್ತರದಲ್ಲಿ ನಿಂತಿರುವುದು ಬಾಕ್ಸರ್ ಫ್ಲಾಯ್ಡ ಮೇವೆದರ್. ಅವರ ಆದಾಯ 85 ದಶಲಕ್ಷ ಡಾಲರ್. ಇದೇ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರೋಜರ್ ಫೆಡರರ್ ಅವರು ಅತಿ ಹೆಚ್ಚು ಶ್ರೀಮಂತ ಟೆನಿಸ್ ಆಟಗಾರ ಎನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.