ಸಚಿನ್‌ಗೆ ಗಾಯ: ಆಟಕ್ಕೆ ಅಡ್ಡಿಯಾಗದು

7

ಸಚಿನ್‌ಗೆ ಗಾಯ: ಆಟಕ್ಕೆ ಅಡ್ಡಿಯಾಗದು

Published:
Updated:

ಮುಂಬೈ (ಪಿಟಿಐ): ‘ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮುಂದಿನ ಪಂದ್ಯದಲ್ಲಿ ಆಡಲು ಯಾವುದೇ ಸಮಸ್ಯೆ ಉಂಟಾಗದು ಎಂದು ಎಂಆರ್‌ಐ ಸ್ಕ್ಯಾನ್ ವರದಿ ಸ್ಪಷ್ಟಪಡಿಸಿದೆ.ಗಾಯದಿಂದ ಬಳಲುತ್ತಿದ್ದ ಸಚಿನ್ ಢಾಕಾದಿಂದ ಆಗಮಿಸಿದವರೇ ಭಾನುವಾರ ರಾತ್ರಿ ಮುಂಬೈಯ ಲೀಲಾವತಿ ಆಸ್ಟತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ‘ಸಚಿನ್‌ಗೆ ಆದ ಗಾಯ ಗಂಭೀರ ಸ್ವರೂಪದ್ದೇನು ಅಲ್ಲ. ಮುಂದಿನ ಪಂದ್ಯದಲ್ಲಿ ಆಡಲು ಅಡ್ಡಿಯಾಗದು. ಗಾಯದಿಂದ ಯಾವ ಸಮಸ್ಯೆಯೂ ಇಲ್ಲ’ ಎಂದು ಆಸ್ಪತ್ರೆಯ ಮಾಧ್ಯಮ ವಕ್ತಾರರು ತಿಳಿಸಿದರು. ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನಲ್ಲಿ ಭಾರತವು ಫೆ. 27ರಂದು ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ.ಸಚಿನ್ ಮಂಗಳವಾರ ಉದ್ಯಾನ ನಗರಿಗೆ ತೆರಳಲಿದ್ದಾರೆ. ಸಹ ಆಟಗಾರರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು ಅಭ್ಯಾಸದಲ್ಲಿ ತೊಡಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry