ಸಚಿನ್‌ಗೆ ಪ್ರಶಸ್ತಿ: ರಾಬ್ ಆಕ್ಷೇಪ

7

ಸಚಿನ್‌ಗೆ ಪ್ರಶಸ್ತಿ: ರಾಬ್ ಆಕ್ಷೇಪ

Published:
Updated:

ಮೆಲ್ಬರ್ನ್(ಪಿಟಿಐ, ಐಎಎನ್‌ಎಸ್): ಕ್ರಿಕೆಟ್ ಲೋಕದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೆ `ಆರ್ಡರ್ ಆಫ್ ಆಸ್ಟ್ರೇಲಿಯಾ~ ಪ್ರಶಸ್ತಿ ನೀಡುವ ಕುರಿತ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರ ಘೋಷಣೆಯನ್ನು ಸಂಸದ ರಾಬ್   ಆಕ್‌ಶೂಟ್ ಪ್ರಶ್ನಿಸಿದ್ದಾರೆ.`ಆದರೆ, ಇದು ಕೇವಲ ಆಸ್ಟ್ರೇಲಿಯಾದವರಿಗೆ ಮಾತ್ರ ಮೀಸಲಾಗಿರುವ ಪ್ರಶಸ್ತಿಯಾಗಿರುವುದರಿಂದ ಇಲ್ಲಿ ಸಮಗ್ರತೆಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.`ಕ್ರಿಕೆಟ್ ಹಾಗೂ ಸಚಿನ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಈ ಪ್ರಶಸ್ತಿ ಘೋಷಣೆಯ ಹಿಂದೆ ಖಂಡಿತವಾಗಿಯೂ ರಾಜತಾಂತ್ರಿಕ ಉದ್ದೇಶವಿರುವುದು ಸ್ಪಷ್ಟವಾಗಿದೆ~ ಎಂದೂ ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry