ಸಚಿನ್‌ಗೆ ಮುಂಬೈ ಪಾಲಿಕೆಯಿಂದ ದಂಡ

7

ಸಚಿನ್‌ಗೆ ಮುಂಬೈ ಪಾಲಿಕೆಯಿಂದ ದಂಡ

Published:
Updated:

ಮುಂಬೈ (ಪಿಟಿಐ): ವಾಸ ಪ್ರಮಾಣಪತ್ರ ಪಡೆಯದೇ ಹೊಸ ಮನೆಯಲ್ಲಿ ನೆಲೆಸಿದ್ದ ಹೆಸರಾಂತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಮಹಾನಗರ ಪಾಲಿಕೆ 4.35 ಲಕ್ಷ ರೂಪಾಯಿ ದಂಡ ವಿಧಿಸಿದೆ.`ಈ ಸಂಬಂಧ ಸಚಿನ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ನಿಯಮಬಾಹಿರವಾಗಿ ಮನೆಯಲ್ಲಿ ನೆಲೆಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ~ ಎಂದು ಬೃಹತ್ ಮುಂಬೈ ಪಾಲಿಕೆಯ ಅಧಿಕಾರಿ ತಿಳಿಸಿದ್ದಾರೆ.ಪಶ್ಚಿಮ ಬಾಂದ್ರಾದ ಪೆರ‌್ರಿ ಕ್ರಾಸ್ ರಸ್ತೆಯಲ್ಲಿ ಸಚಿನ್ ನಿರ್ಮಿಸಿರುವ ಭವ್ಯ ಬಂಗಲೆಯ ಗೃಹ ಪ್ರವೇಶ ಕಳೆದ ತಿಂಗಳು ನಡೆದಿತ್ತು. ವಾಸ ಪ್ರಮಾಣಪತ್ರ ಪಡೆಯದೆ ಆ ಮನೆಗೆ ಹೋಗಿದ್ದು ಚರ್ಚೆಗೆ ಗ್ರಾಸವಾಗಿತ್ತು.

ನಿಯಮ ಪಾಲನೆಯಲ್ಲಿ ವಿನಾಯಿತಿ ಸರಿಯಲ್ಲ ಎಂದು ಮೇಯರ್ ಆಗಿರುವ ಶಿವಸೇನೆಯ ಶ್ರದ್ಧಾ ಜಾಧವ್ ಸಮರ್ಥಿಸಿಕೊಂಡಿದ್ದಾರೆ.ಮುಂಬೈ ಹೊರವಲಯ ಅಭಿವೃದ್ಧಿಯ ಉಸ್ತುವಾರಿ ಹೊಂದಿರುವ ಜವಳಿ ಖಾತೆ ಸಚಿವ ಮೊಹಮ್ಮದ್ ಆರಿಫ್ ನಸೀಮ್ ಖಾನ್, ದಂಡ ವಿಧಿಸದಂತೆ ಪಾಲಿಕೆ ಆಯುಕ್ತ ಸುಭೋದ್ ಕುಮಾರ್ ಅವರಿಗೆ ಕೋರಿದ್ದರು.

 

ಆದರೆ,  ಪಾಲಿಕೆ ಅನ್ಯರಿಗೆ ಅನ್ವಯವಾಗುವ ನಿಯಮವನ್ನೇ ಸಚಿನ್ ಪ್ರಕರಣದಲ್ಲೂ ಪಾಲಿಸಿತು. ಪ್ರತಿ ಚದುರ ಮೀಟರ್‌ಗೆ 50 ರೂಪಾಯಿಯಂತೆ ಒಟ್ಟು 836 ಚದುರ ಮೀಟರ್ ವಿಸ್ತೀರ್ಣಕ್ಕೆ ದಂಡ ವಿಧಿಸಲಾಗಿದೆ.  ಇದೀಗ ದಂಡ ಪಾವತಿ ನಂತರ ಸಚಿನ್ ಅವರಿಗೆ ಪ್ರಮಾಣಪತ್ರ ನಿಗದಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry