ಸಚಿನ್ ಆಟೋಗ್ರಾಫ್ ಬೇಕು: ದೋನಿ

7

ಸಚಿನ್ ಆಟೋಗ್ರಾಫ್ ಬೇಕು: ದೋನಿ

Published:
Updated:
ಸಚಿನ್ ಆಟೋಗ್ರಾಫ್ ಬೇಕು: ದೋನಿ

ಬೆಂಗಳೂರು: ಕ್ರಿಕೆಟ್ ಅಭಿಮಾನಿಯಾಗಿ ಮಹೇಂದ್ರ ಸಿಂಗ್ ದೋನಿಗೆ ಶ್ರೇಷ್ಠ ಆಟಗಾರನ ಆಟೋಗ್ರಾಫ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರಿಗೆ ಆ ಶ್ರೇಷ್ಠ ಆಟಗಾರನ ಹಸ್ತಾಕ್ಷರ ಬೇಕಂತೆ. ಅದು ತಂಡದ ಸಹ ಆಟಗಾರ ಹಾಗೂ ಕ್ರಿಕೆಟ್‌ನ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್.‘ಈ ಸಂಗತಿಯನ್ನು ಊಹಿಸಲು ಹೆಚ್ಚು ಕಷ್ಟಪಡಬೇಕಾದ ಅಗತ್ಯ ಇಲ್ಲ. ಅದು ಸಚಿನ್ ತೆಂಡೂಲ್ಕರ್ ಆಟೋಗ್ರಾಫ್. ಅವರ ಹಸ್ತಾಕ್ಷರ ನನಗೆ ಬೇಕು’ ಎಂದು ದೋನಿ ನಗರದಲ್ಲಿ ನಡೆದ ವ್ಯಂಗ್ಯಚಿತ್ರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಪುಸ್ತಕದಲ್ಲಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ತಂಡದ ಆಟಗಾರರ ಚಿತ್ರಗಳಿವೆ. ಸಮಾರಂಭದಲ್ಲಿ ಹರಭಜನ್ ಸಿಂಗ್, ವಿರಾಟ್ ಕೊಹ್ಲಿ ಹಾಗೂ ಪಿಯೂಷ್ ಚಾವ್ಲಾ ಉಪಸ್ಥಿತರಿದ್ದರು.ದೋನಿಗೆ ಯುವರಾಜ್ ವ್ಯಂಗ್ಯ ಚಿತ್ರ ಬಹಳ ಇಷ್ಟವಾಯಿತು. ಅದೇ ರೀತಿಯಲ್ಲಿ ಹರಭಜನ್‌ಗೆ ಗೌತಮ್ ಗಂಭೀರ್ ಅವರ ಕ್ಯಾರಿಕೇಚರ್ ತುಂಬಾ ಇಷ್ಟವಾಯಿತು ಎನ್ನುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry