ಸಚಿನ್ ಇಲ್ಲದ ತಂಡ ಊಹಿಸಿಕೊಳ್ಳುವುದೂ ಕಷ್ಟ: ಕುಂಬ್ಳೆ

7

ಸಚಿನ್ ಇಲ್ಲದ ತಂಡ ಊಹಿಸಿಕೊಳ್ಳುವುದೂ ಕಷ್ಟ: ಕುಂಬ್ಳೆ

Published:
Updated:

ನವದೆಹಲಿ (ಪಿಟಿಐ): 23 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಬಳಿಕ ಸಚಿನ್ ತೆಂಡೂಲ್ಕರ್ ವಿದಾಯದ ಬಗ್ಗೆ ಸಣ್ಣ ಸುಳಿವು ನೀಡಿರಬಹುದು. ಆದರೆ ಸಚಿನ್ ಇಲ್ಲದ ಭಾರತ ಕ್ರಿಕೆಟ್ ತಂಡವನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ನುಡಿದಿದ್ದಾರೆ.`ಸಚಿನ್ ಮತ್ತಷ್ಟು ದಿನ ಆಡಬೇಕು. ಅವರಿಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳುವುದೂ ಕಷ್ಟ. ನಾನು ತೆಂಡೂಲ್ಕರ್ ಜೊತೆ ಹಲವು ವರ್ಷ ಆಡಿದ್ದೇನೆ. ಒಂದು ದಿನ ಅವರು ವಿದಾಯ ನಿರ್ಧಾರ ತೆಗೆದುಕೊಳ್ಳಲೇಬೇಕು. ಆದರೆ ಈ ವಿಷಯ ಸಂಪೂರ್ಣ ತೆಂಡೂಲ್ಕರ್‌ಗೆ ಬಿಟ್ಟ ವಿಚಾರ~ ಎಂದು ಮಾಜಿ ಲೆಗ್ ಸ್ಪಿನ್ನರ್ ಹೇಳಿದ್ದಾರೆ.

`ಯಾವುದೇ ಕ್ರೀಡಾಪಟುವಿರಲಿ. ಇಷ್ಟು ವರ್ಷ ಆಡಿದ ಮೇಲೆ ವಿದಾಯ ಹೇಳುವುದು ಕಷ್ಟದ ನಿರ್ಧಾರ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry